ಪುತ್ತೂರು : ‘ಸೀಡ್ಸ್ ಆಫ್ ಹೋಪ್ ಎಂಬ ಸಮಾಜಮುಖಿ ಕಾರ್ಯಕ್ರಮ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ.21: ದಾನವು ಜೀವ ಉಳಿಸಿದರೆ ಕೇಶದಾನವು ಗೌರವ ಉಳಿಸುತ್ತದೆ. ಕೇಶದಾನದಿಂದ ಕ್ಯಾನ್ಸರ್ ಪೀಡಿತರಾಗಿ ಕೂದಲು ಕಳೆದುಕೊಂಡಿರುವ ನೋವು ಮಾಯವಾಗುವುದರ ಜತೆಗೆ ಅವರಿಗೆ ಗೌರವ ನೀಡುತ್ತದೆ. ಕೇಶದಾನದ ಬಗ್ಗೆ ಸಾಮಾಜಿಕ ಜಾಗೃತಿ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಸ್ವಯಂ ಸೇವಾ ಸಂಘಟನೆಗಳು ಕೈಜೋಡಿಸಬೇಕು ಎಂದು ಕ್ಯಾನ್ಸರ್ ಸರ್ವೆವೈರ್ ಆಗಿರುವ ಸುಧಾನ ಶಾಲಾ ಶಿಕ್ಷಕಿ ಸಾಧನಾ ಹೆಬ್ಬಾರ್ ಹೇಳಿದರು.

ಭಾನುವಾರ ಪುತ್ತೂರಿನ ಮುಳಿಯ ಪುತ್ತೂರು ಕೋರ್ಟು ರಸ್ತೆಯಲ್ಲಿರುವ ಮುಳಿಯ ಜೆಸಿಐ ಟ್ರೈನಿಂಗ್ ಹಾಲ್‌ನಲ್ಲಿ ಪುತ್ತೂರಿನ 9 ಶಾಲಾ ವಿದ್ಯಾರ್ಥಿಗಳು ಸೇರಿಕೊಂಡು ಮುಳಿಯ ಪ್ರತಿಷ್ಠಾನದ ಮಾರ್ಗದರ್ಶನ ಮತ್ತು ಆಶ್ರಯದಲ್ಲಿ ಕ್ಯಾನ್ಸರ್‌ನಿಂದ ಕೂದಲು ಕಳೆದುಕೊಳ್ಳುವವರಿಗೆ ವಿಗ್ ನೀಡುವಂತಹ ‘ಸೀಡ್ಸ್ ಆಫ್ ಹೋಪ್ ಎಂಬ ಸಮಾಜಮುಖಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸೀಡ್ಸ್ ಆಫ್ ಹೋಪ್‌ನ ಕಾರ್ಯವು ಹೃದಯ ತಟ್ಟುವ ಕೆಲಸವಾಗಿದೆ. ಕೂದಲು ಕಳೆದುಕೊಂಡು ಸಾಮಾಜಿಕ ಅವಮಾನ ಅನುಭವಿಸುವ ಮಂದಿಗೆ ಇದೊಂದು ಸಂತೋಷದಾಯಕ ವಿಚಾರವಾಗಿದೆ. ಮಹಿಳೆಯರು ಕೂದಲಿಗೆ ಹೆಚ್ಚಿನ ಆದ್ಯತೆ, ಗಮನ ಇರಿಸುತ್ತಾರೆ. ಕೂದಲು ಹೋದರೆ ತುಂಬಾ ನೋವು ಅನುಭವಿಸುತ್ತಾರೆ. ಅದು ಮಹಿಳೆಯ ಸೌಂದರ್ಯಕ್ಕೆ ಹೊಡೆತವಾಗುತ್ತದೆ. ಸ್ವಯಂ ಕೇಶದಾನ ಮಾಡುವ ಮೂಲಕ ಕೇಶದಾನ ಯೋಜನೆಗೆ ಮುಂದಾಗಿರುವ ಇಲ್ಲಿನ ವಿದ್ಯಾರ್ಥಿಗಳ ಚಿಂತನೆ ಸಮಾಜಕ್ಕೆ ಮಾದರಿಯಾಗಿದೆ. ಕ್ಯಾನ್ಸರ್ ರೋಗಿಗಳಿಗೆ ಆತ್ಮವಿಶ್ವಾಸ ಮೂಡಿಸುವ ಕೆಲಸವಾಗಿದೆ ಎಂದರು. ಮುಳಿಯ ಫೌಂಡೇಶನ್ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಅಧ್ಯಕ್ಷತೆ ವಹಿಸಿದ್ದರು.ಕಳೆದ ದಿನ. ಈ ಕಾರ್ಯಾಕ್ರಮದಲ್ಲಿ ಹಲವಾರು ಗಣ್ಯರು ಉಪಸ್ಥಿತರಿದ್ದರು.

Also Read  ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗೆ ಕಡಬದ ► ಕದಂಬ ಅಟೋ ಚಾಲಕ-ಮಾಲಕರ ಸಂಘದಿಂದ ಸಹಾಯಧನ ಹಸ್ತಾಂತರ

error: Content is protected !!
Scroll to Top