ರಾಜ್ಯಸರಕಾರದ ಹಿಂದೂ ವಿರೋಧಿ ದೋರಣೆಯನ್ನು ಖಂಡಿಸಿ ► ತಾಲೂಕಿನಾದ್ಯಂತ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಪುತ್ತೂರು, ಅ.11. ರಾಜ್ಯ ಸರಕಾರದ ಹಿಂದು ವಿರೋಧಿ ದೋರಣೆಯನ್ನು ಖಂಡಿಸಿ ಹಿಂದೂ ಜಾಗರಣಾ ವೇದಿಕೆ, ವಿಶ್ವಹಿಂದು ಪರಿಷತ್ ಬಜರಂಗಳದ ವತಿಯಿಂದ ಬುಧವಾರ ಪುತ್ತೂರು ತಾಲೂಕಿನಾದ್ಯಂತ ಏಕಕಾಲದಲ್ಲಿ ಪ್ರತಿಭಟನೆ ನಡೆಯಿತು.

ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಕಾವು, ಕುಂಬ್ರ, ಬೆಟ್ಟಂಪಾಡಿ, ಕಬಕ, ಸವಣೂರು, ಕಾಣಿಯೂರು, ಪುರುಷರಕಟ್ಟೆ, ಕೋಡಿಂಬಾಡಿ, ಉಪ್ಪಿನಂಗಡಿ, ಆಲಂಕಾರು, ಕಡಬ ಹಾಗೂ ನೆಲ್ಯಾಡಿಯಲ್ಲಿ ಹಿಂದೂ ಜಾಗರಣಾ ವೇದಿಕೆ, ವಿಶ್ವಹಿಂದು ಪರಿಷತ್ ಬಜರಂಗಳದ ಪ್ರತಿಭಟನೆ ನಡೆಸಿದರು.

ಪುತ್ತೂರು ಬಸ್ ನಿಲ್ದಾಣದ ಬಳಿಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಬಜರಂಗದಳ ಜಿಲ್ಲಾ ಗೋರಕ್ಷ ಪ್ರಮುಖ್ ಮುರಳಿಕೃಷ್ಣ ಹಸಂತಡ್ಕ ಮಾತನಾಡಿ, ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ಬಳಿಕ ಹಿಂದು ಕಾರ್ಯಕರ್ತರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಅನಾವಶ್ಯಕವಾಗಿ ಹಿಂದುಗಳನ್ನು ಕೆಣಕುವ ಕೆಲಸವನ್ನು ಸಿದ್ಧರಾಮಯ್ಯನವರು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್ ಸತೀಶ್ಚಂದ್ರ, ಬಿಜೆಪಿ ಮಂಡಲದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ತಾ,ಪಂ ಸದಸ್ಯರಾ ಶಿವರಂಜನ್ ಹಾಗೂ ಮುಕುಂದ, ನಗರ ಸಭಾ ಉಪಾಧ್ಯಕ್ಷ ವಿಶ್ವನಾಥ ಗೌಡ, ಸದಸ್ಯರಾದ ರಾಜೇಶ್ ಬನ್ನೂರು, ವಿನಯ ಭಂಡಾರಿ, ಜೀವಂಧರ್ ಜೈನ್, ಸುಜೀಂದ್ರ ಪ್ರಭು, ಹರೀಶ್ ನಾಕ್, ಹಿಂದು ಸಂಘಟನೆಗಳ ಮುಖಂಡರಾದ ಡಾ. ಪ್ರಸನ್ನ, ಶ್ರೀಧರ ತೆಂಕಿಲ, ಜನಾರ್ದನ ಬೆಟ್ಟ, ಅಜಿತ್ ರೈ ಹೊಸಮನೆ, ನವೀನ್ ಕುಲಾಲ್, ದಿನೇಶ್, ಪ್ರೇಮಲತಾ ರಾವ್, ಮೋಹಿನಿ ದಿವಾಕರ್ ಮೊದಲಾದವರು ಉಪಸ್ಥಿತರಿದ್ದರು.

error: Content is protected !!

Join the Group

Join WhatsApp Group