ರಾಷ್ಟ್ರೀಯ ಮಟ್ಟದ ಚಿತ್ರಕಲಾ ಸ್ಪರ್ಧೆ ➤ ಪಂಜದ ಕ್ರಿಯೇಟಿವ್ ಚಿತ್ರಕಲಾ ಶಾಲೆಯ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ರಾಷ್ಟ್ರ ಪ್ರಶಸ್ತಿಯ ಗರಿ

(ನ್ಯೂಸ್ ಕಡಬ) newskadaba.com ಪಂಜ, ಡಿ.18: ಕೇರ್ ಟ್ರಸ್ಟ್( ರಿ )ಪ್ರೈಮ್ ಎಜುಕೇಶನ್ ತಮಿಳುನಾಡು, ಇದರ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಆನ್ಲೈನ್ ಚಿತ್ರಕಲಾ ಸ್ಪರ್ಧೆಯಲ್ಲಿ ಪಂಜದ ಕ್ರಿಯೇಟಿವ್ ಚಿತ್ರಕಲಾ ಶಾಲೆಯ ವಿದ್ಯಾರ್ಥಿಗಳು ಮತ್ತೊಮ್ಮೆ ಪ್ರಶಸ್ತಿ ಪಡೆದು ಹೆಮ್ಮೆ ಗರಿ ಮೂಡಿಸಿದ್ದಾರೆ.

ಪ್ರೌಢ ವಿಭಾಗ: ವಿದ್ಯಾರ್ಥಿಗಳಾದ ,ಅಭಿನ್ ಗೌಡ ಪ್ರಥಮ: ಸೈಂಟ್ ಜೋಸೆಫ್ ಪ್ರೌಢಶಾಲೆ ಸುಳ್ಯ.
ಅಭಿಜ್ಞಾ ಪಿ.ಎಸ್ :ದ್ವಿತೀಯ :ಸೈಂಟ್ ಆನ್ಸ್ ಪ್ರೌಢಶಾಲೆ ಕಡಬ.

ಪ್ರಾಥಮಿಕ ವಿಭಾಗ:
ಅನ್ವಿತಾ ಸಿ-ಪ್ರಥಮ: ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ನಾಗತೀರ್ಥ.
ಕುಶಿತ್ ಮಲ್ಲಾರ: ದ್ವಿತೀಯ ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ .
ಕುಶ್ಮಿತಾ. ಎಸ್ :ತೃತಿಯ ಕೆ ಎಸ್ ಗೌಡ ಸ್ಕೂಲ್ ನಿಂತಿಕಲ್ಲು.
ಪ್ರಣಮ್ ಸಂಕಡ್ಕ : ಚತುರ್ಥ ಸೈಂಟ್ ಆನ್ಸ್ ಸ್ಕೂಲ್ ಕಡಬ

ಇವರು ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಚಿತ್ರಕಲಾ ಪ್ರಶಸ್ತಿ ಪಡೆದಿದ್ದಾರೆ .ಚಿತ್ರಕಲೆಯಲ್ಲಿ ನಿರಂತರ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪಡೆದಿರುವ ವಿದ್ಯಾರ್ಥಿಗಳಿಗೆ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರಕಲಾ ಶಿಕ್ಷಕ ಸತೀಶ್ ಪಂಜ ಮಾರ್ಗದರ್ಶನ ನೀಡಿರುತ್ತಾರೆ.

error: Content is protected !!

Join the Group

Join WhatsApp Group