ಸಾಮಾಥ್ರ್ಯ ಆಧಾರಿತ ಸಾಲ ಯೋಜನೆಯ ಕೈಪಿಡಿ ಬಿಡುಗಡೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.18: ನಬಾರ್ಡ್ ಸಾಮಾಥ್ರ್ಯ ಆಧಾರಿತ ಸಾಲ ಯೋಜನೆಯ ಆಧಾರದಲ್ಲಿ ಲೀಡ್ ಬ್ಯಾಂಕ್ ಮೂಲಕ ಜಿಲ್ಲಾ ಸಾಲ ಯೋಜನೆಯನ್ನು ರೂಪಿಸಿ ನಿಗದಿತ ಗುರಿಯನ್ನು ಸಾಧಿಸಬೇಕು ಎಂದು ಬ್ಯಾಂಕ್ ಅಧಿಕಾರಿಗಳಿಗೆ ಡಿ.ಸಿ.ಸಿ.ಡಿ.ಎಲ್.ಆರ್.ಸಿ ಚೇರ್‍ಮ್ಯಾನ್ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಸೆಲ್ವಮಣಿ ಆರ್ ಸೂಚಿಸಿದರು.ಅವರು ಇಂದು ತಮ್ಮ ಕಚೇರಿಯಲ್ಲಿ ನಬಾರ್ಡ್ ವತಿಯಿಂದ ಸಾಮಾಥ್ರ್ಯ ಆಧಾರಿತ ಸಾಲ ಯೋಜನೆಯ ಆರ್ಥಿಕ ವರ್ಷ 2021-22ರ ಕೈಪಿಡಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.


ಜಿಲ್ಲೆಯ ಎಲ್ಲಾ ಬ್ಯಾಂಕಿನ ಮ್ಯಾನೇಜರ್‍ಗಳಿಗೆ ವಿವಿಧ ಕ್ಷೇತ್ರಗಳಲ್ಲಿರುವ ಸಾಮಥ್ರ್ಯಾಧಾರಿತ ಸಾಲ ಯೋಜನೆಯನ್ನು ನಬಾರ್ಡ್ ಸಂಸ್ಥೆಯ ಮೂಲಕ ಗುರುತಿಸಿ ಕೊಡಲಾಗಿದೆ ಎಂದ ಅವರು, ಜಿಲ್ಲಾ ಸಾಲ ಯೋಜನೆಯಡಿ ರೂಪಿಸುವ ನಿಗದಿತ ಗುರಿಯನ್ನು ಸಾಧಿಸಿ ಅರ್ಹರಿಗೆ ಆರ್ಥಿಕ ಸೌಲಭ್ಯಗಳನ್ನು ಒದಗಿಸಬೇಕು ಎಂದರು. ಜಿಲ್ಲೆಯ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪ್ರವೀಣ್ ಎಂ.ಪಿ ಮಾತನಾಡಿ, ಕಳೆದ ವರ್ಷದ ಜಿಲ್ಲಾ ಸಾಲ ಯೋಜನೆಯಡಿಯಲ್ಲಿ ನಿರ್ಧಿಷ್ಟ ಗುರಿ ಸಾಧಿಸಲು ಎಲ್ಲಾ ಬ್ಯಾಂಕ್‍ಗಳು ಶ್ರಮಿಸಿದ್ದು, 2021-2022ರ ಅವಧಿಯಲ್ಲಿಯೂ ಹೆಚ್ಚಿನ ಪ್ರಮಾಣದಲ್ಲಿ ಗುರಿ ಸಾಧಿಸುವತ್ತ ಶ್ರಮಿಸಬೇಕೆಂದರು. 2021-22ರ ನಬಾರ್ಡ್‍ನ ಸಾಮಾಥ್ರ್ಯ ಆಧಾರಿತ ಸಾಲ ಯೋಜನೆಯ ಮೇಲೆ ವಾರ್ಷಿಕ ಸಾಲ ಯೋಜನೆಯನ್ನು ಸಿದ್ಧಪಡಿಸಲಾಗುವುದೆಂದರು.

Also Read  ಅಮರಮುಡ್ನೂರು: ಘನ ಮತ್ತು ದ್ರವ್ಯ ತ್ಯಾಜ್ಯ ವಿಲೇವಾರಿ ನಿರ್ವಹಣಾ ಘಟಕ ನಿರ್ಮಾಣ ಕಾಮಗಾರಿ ಕೊನೆಯ ಹಂತ


ನಬಾರ್ಡ್ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಸಂಗೀತಾ ಎಸ್. ಕರ್ತಾ ಮಾತನಾಡಿ, ಈ ಯೋಜನೆಯಡಿ ಆರ್ಥಿಕ ವರ್ಷ 2021-2020 ರಅನ್ವಯ ಕೃಷಿ ಹಾಗೂ ಇನ್ನಿತರ ಚಟುವಟಿಕೆಗಳಿಗೆ 7,651.6 ಕೋಟಿ, ಅತೀ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಕ್ಷೇತ್ರಕ್ಕೆ 4,004.64 ಕೋಟಿ, ಶೈಕ್ಷಣಿಕ ಕ್ಷೇತ್ರಕ್ಕೆ 256.50 ಕೋಟಿ, ಗೃಹ ಸಾಲ ಕ್ಷೇತ್ರಕ್ಕೆ 1,300 ಕೋಟಿ, ಆದ್ಯತಾ ರಂಗಕ್ಕೆ 13,984.72 ಕೋಟಿ ಕ್ರೀಯಾ ಯೋಜನೆಯನ್ನು ಸಿದ್ಧಪಡಿಸಿ ಬಿಡುಗಡೆ ಮಾಡಲಾಗಿದೆ ಎಂದರು.ಈ ಸಂದರ್ಭದಲ್ಲಿ ಕೆನರಾ ಬ್ಯಾಂಕಿನ ರಿಜಿನಲ್ ಬ್ಯಾಂಕ್ ಮ್ಯಾನೇಜರ್ ಸುಚಿತ್ರಾ, ಬ್ಯಾಂಕ್ ಆಫ್ ಬರೋಡಾದ ರಿಜಿನಲ್ ಮ್ಯಾನೇಜರ್ ಸುನೀಲ್ ಕೆ ಪೈ, ಕರ್ನಾಟಕ ಬ್ಯಾಂಕ್ ರಿಜಿನಲ್ ಮ್ಯಾನೇಜರ್ ಪ್ರಸಾನಂದ್, ಎಸ್‍ಸಿಡಿಸಿಸಿ ಬ್ಯಾಂಕಿನ ಸಿಇಓ ರವೀಂದ್ರ, ಕರ್ನಾಟಕ ವಿಕಾಸ್ ಗ್ರಾಮೀಣ ಬ್ಯಾಂಕಿನ ರಿಜಿನಲ್ ಮ್ಯಾನೇಜರ್ ಸೂರ್ಯ ನಾರಾಯಣ, ಯೂನಿಯನ್ ಬ್ಯಾಂಕಿನ ಚೀಫ್ ಮ್ಯಾನೇಜರ್ ಕೃಷ್ಣಮೂರ್ತಿ, ಲೀಡ್ ಬ್ಯಾಂಕಿನ ಅಧಿಕಾರಿ ಗಿರೀಶ್ ಯು.ಕೆ. ಮತ್ತಿತರರು ಉಪಸ್ಥಿತರಿದ್ದರು.

Also Read  ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದ ಕಾರು ➤ ವಿವಾಹ ನಿಶ್ಚಯವಾಗಿದ್ದ ಯುವಕ‌ ಸೇರಿ ಇಬ್ಬರು ಮೃತ್ಯು

error: Content is protected !!
Scroll to Top