ವಿಧಾನಪರಿಷತ್ ಘರ್ಷಣೆಗೆ ಕಾರಣದ ಬಗ್ಗೆ ಚರ್ಚೆಯಾಗಬೇಕು ➤ ಮಾಜಿ ಸಚಿವ ರಮಾನಾಥ ರೈ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.17: ವಿಧಾನಪರಿಷತಲ್ಲಿ ಘರ್ಷಣೆ ಆರಂಭಕ್ಕೆ ಮೂಲ ಕಾರಣವೇನು? ಈ ಬಗ್ಗೆ ಚರ್ಚೆ ಆಗಬೇಕು ಎಂದು ಮಂಗಳೂರಿನಲ್ಲಿ ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.ವಿಧಾನಪರಿಷತ್ ಸಭೆಯಲ್ಲಿ ಕಾಂಗ್ರೆಸ್ -ಕಮಲ ಸದಸ್ಯರ ಘರ್ಷಣೆ ವಿಚಾರಕ್ಕೆ ಅವರು ಪ್ರತಿಕ್ರಿಯಿಸಿದ್ದಾರೆ.

ಪ್ರೆಸ್ ಮೀಟ್ ಕರೆದು ಪತ್ರಕರ್ತರು ಬರದಂತೆ ಬಾಗಿಲು ಬಂದು ಮಾಡಿದ್ರೆ ಸರಿಯಾಗುತ್ತದೆಯೇ ಎಂದು ಪ್ರಶ್ನಿಸಿದ ಅವರು, ಹಾಗೆಯೇ ಸದನದ ಬಾಗಿಲು ಮುಚ್ಚಿ ಸಭಾಪತಿ ಬರದಂತೆ ತಡೆದದ್ದು ಸರಿಯಾಗುತ್ತಾ? ಎಂದರು. ಎಳೆದದ್ದು ಸರಿಯಾ? ಅನ್ನೋದಕ್ಕಿಂತಲೂ ಕೂತದ್ದು ಸರಿಯಾ? ಈ ಹಿಂದೆಯೂ ಬಿಜೆಪಿ ಬಾಗಿಲು ಮುಚ್ಚಿ ಸದನ ನಡೆಸಿತ್ತು. ಬಾಗಿಲು ಒಡೆದಿದ್ದು, ಎಳೆದಾಡಿದ್ದು ಎಲ್ಲವೂ ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಆಗಿದೆ ಅಷ್ಟೇ. ಉಪಸಭಾಪತಿ ಕೂರದೇ ಸಮಸ್ಯೆ ಪರಿಹಾರ ಮಾಡಬಹುದಿತ್ತು ಎಂದು ಅವರು ಹೇಳಿದರು.

Also Read  ಕಾಲೇಜಿಗೆ ನುಗ್ಗಿ ವಿದ್ಯಾರ್ಥಿನಿಗೆ ಕತ್ತರಿಯಿಂದ ಇರಿದ ವಿದ್ಯಾರ್ಥಿ….!

error: Content is protected !!
Scroll to Top