ಸಿಐಡಿ DYSP ಲಕ್ಷ್ಮಿ ನೇಣಿಗೆ ಶರಣು.!

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ.17: ಸಿಐಡಿ ಡಿಎಸ್​​ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ವಿ. ಲಕ್ಷ್ಮೀ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನ್ನಪೂರ್ಣೇಶ್ವರಿ ನಗರ ಠಾಣಾ ವ್ಯಾಪ್ತಿಯ ಸ್ನೇಹಿತೆಯ ಮನೆಯಲ್ಲಿ ಲಕ್ಷ್ಮೀ(33) ಆತ್ಮಹತ್ಯೆಗೆ ಶರಣಾಗಿದ್ದಾರೆ.

ಅವರು 2014 ರ ಬ್ಯಾಚ್ ಅಧಿಕಾರಿಯಾಗಿದ್ದು, 2017 ರಲ್ಲಿ ಸಿಐಡಿಯಲ್ಲಿ ಡಿಎಸ್​ಪಿ ಯಾಗಿ ನೇಮಕಗೊಂಡಿದ್ದರು. ಲಕ್ಷ್ಮೀ 2012ರಲ್ಲಿ ನವೀನ್ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದರು. ಅವರು ಮತ್ತು ಗಂಡನ ನಡುವೆ ದಿನ ಕಳೆದಂತೆ ವೈಮನಸ್ಯ ಶುರುವಾಗಿತ್ತು. ಇದರಿಂದ ಮಾನಸಿಕವಾಗಿ ನೊಂದಿದ್ದ ಡಿವೈಎಸ್ಪಿ ಲಕ್ಷ್ಮೀ 8 ವರ್ಷಗಳಿಂದ ಮಕ್ಕಳಿಲ್ಲದೆ ಖಿನ್ನತೆಗೊಳಗಾಗಿದ್ದರು. ನಿನ್ನೆ ರಾತ್ರಿ ಅನ್ನಪೂರ್ಣೇಶ್ವರಿ ನಗರದ ವಿನಾಯಕ ಲೇಔಟ್​ನಲ್ಲಿರುವ ಸ್ನೇಹಿತನ ಮನೆಯಲ್ಲಿ ಅವರ ಶವ ಪತ್ತೆಯಾಗಿದೆ.ಕಳೆದ ದಿನ ಕೂಡ ಡಿಪ್ರೆಷನ್ ನಲ್ಲಿದ್ದ ಲಕ್ಷ್ಮೀ ತಮ್ಮ ಸ್ನೇಹಿತ ಮನೋಹರ್ ಮನೆಗೆ ಹೋಗಿದ್ದರು. ಬಿಬಿಎಂಪಿ ಎ1 ಕಾಂಟ್ರಾಕ್ಟರ್ ಆಗಿದ್ದ ಮನೋಹರ್ ಜೊತೆ ನಿನ್ನೆ ರಾತ್ರಿ ಲಕ್ಷ್ಮೀ ಸೇರಿ ಐವರು ಸೇರಿ ಪಾರ್ಟಿ ಮಾಡಿದ್ದರು. ಪಾರ್ಟಿ ನಂತರ 10 ಗಂಟೆಗೆ ರೂಂಗೆ ತೆರಳಿದ್ದ ಲಕ್ಷ್ಮೀ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Also Read  ದ.ಕ. ಜಿಲ್ಲಾಧಿಕಾರಿ ಕೆ.ಜಿ.ಜಗದೀಶ್ ವರ್ಗಾವಣೆ ► ನೂತನ ಜಿಲ್ಲಾಧಿಕಾರಿಯಾಗಿ ಶಶಿಕಾಂತ್ ಸೆಂತಿಲ್ ನೇಮಕ

 

error: Content is protected !!
Scroll to Top