ಡಿಸೆಂಬರ್ 29 ರಂದು ಉಪನ್ಯಾಸ ಸ್ಪರ್ಧೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 16. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ವತಿಯಿಂದ ವಿಜ್ಞಾನ ಪದವಿ ವಿದ್ಯಾರ್ಥಿಗಳು ಹಾಗೂ ಬಿ.ಎಡ್ ಪ್ರಶಿಕ್ಷಣಾರ್ಥಿಗಳಿಗಾಗಿ ರಾಜ್ಯಮಟ್ಟದ ಕನ್ನಡ ವಿಜ್ಞಾನ ಉಪನ್ಯಾಸ ಸ್ಫರ್ಧೆಯನ್ನು ಏರ್ಪಡಿಸಲಾಗಿದ್ದು,  “ಸಮಾಜದ ಹಿಂದುಳಿದ ವರ್ಗಗಳ ಯುವ ಸಮೂಹದ ಉನ್ನತ ಶಿಕ್ಷಣದ ಕನಸಿನ ಸಾಕ್ಷಾತ್ಕರಣ ಹಾಗೂ ವಿಶ್ವಮಾನವ ಸಂಪನ್ಮೂಲಗಳಾಗಿ ಪರಿವರ್ತನೆ” ಎಂಬ ವಿಷಯದ ಕುರಿತು ಉಪನ್ಯಾಸ ಸ್ಫರ್ಧೆಯು ಡಿಸೆಂಬರ್ 29 ರಂದು  ನಡೆಯಲಿದೆ. ನಗರದ ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ  ಭೌತಶಾಸ್ತ್ರ, ಗಣಿತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಜೀವಶಾಸ್ತ್ರ ವಿಷಯಗಳಲ್ಲಿ ನಡೆಯುವ ಸ್ಫರ್ಧೆಗಳಿಗೆ ತಲಾ ಒಬ್ಬರಂತೆ ಒಂದು ಕಾಲೇಜಿನಿಂದ 4 ವಿದ್ಯಾರ್ಥಿಗಳು ಭಾಗವಹಿಸಬಹುದು.

Also Read  ಸ್ಥಿರಾಸ್ತಿ- ಸೆಪ್ಟೆಂಬರ್ 2 ರಿಂದ ಎನಿವೇರ್ ನೋಂದಣಿ ಜಾರಿ


ಆಸಕ್ತ ವಿದ್ಯಾರ್ಥಿಗಳಿಗೆ  ಹೆಸರು ನೋಂದಾಯಿಸಿಕೊಳ್ಳಲು ಡಿಸೆಂಬರ್ 18 ರವರೆಗೆ ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ ಎಚ್.ಎಸ್.ಟಿ ಸ್ವಾಮಿ (ಮೊಬೈಲ್-ಸಂ.9448565534) ಹಾಗೂ ಮಂಗಳೂರು ರಥಬೀದಿಯ ಡಾ.ಪಿ.ದಯಾನಂದ ಪೈ-ಪಿ.ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು (ಮೊಬೈಲ್-ಸಂ. 8970788947) ಸಂಪರ್ಕಿಸಬಹುದು.

error: Content is protected !!
Scroll to Top