ಕಾರ್ಮಿಕ ಇಲಾಖೆಯಲ್ಲಿ ಡಿ. 19 ರವರೆಗೆ ಸಕಾಲ ಸಪ್ತಾಹ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.16: ನಿಗದಿತ ಕಾಲಮಿತಿಯಲ್ಲಿ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಸಕಾಲ ಯೋಜನೆಯನ್ನು ರಾಜ್ಯ ಸರ್ಕಾರವು ಜಾರಿಗೆ ತಂದಿದ್ದು, ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆಯು ಸಕಾಲ ಸಪ್ತಾಹವನ್ನು ಡಿಸೆಂಬರ್ 19 ರವರೆಗೆ ಆಚರಿಸುತ್ತಿದೆ.

ಕಾರ್ಮಿಕ ಇಲಾಖೆಯಲ್ಲಿ  ಸಕಾಲ ಯೋಜನೆಯಡಿ ವಿಲೇವಾರಿ ಮಾಡುವ ಸೇವೆಗಳು :  ಗುತ್ತಿಗೆ ಕಾರ್ಮಿಕ (ಕ್ರಮೀಕರಣ ಮತ್ತು ರದ್ಧತಿ) ಕಾಯ್ದೆ, 1970 ರಡಿಯಲ್ಲಿ ಪ್ರಮುಖ ಉದ್ಯೋಗದಾತರ ನೋಂದಣಿ, ಗುತ್ತಿಗೆದಾರರಿಗೆ ಪರವಾನಗಿ ನೀಡುವಿಕೆ, ಗುತ್ತಿಗೆದಾರರ ಪರವಾನಗಿ ನವೀಕರಣ, ಕಾರ್ಮಿಕ ಸಂಘಗಳ ಕಾಯ್ದೆ, 1926 ರಡಿಯಲ್ಲಿ ನೋಂದಣಿ, ಮೋಟಾರು ಸಾರಿಗೆ ಕಾರ್ಮಿಕರ ಕಾಯ್ದೆ, 1961 ರಡಿಯಲ್ಲಿ ನೋಂದಣಿ, ಅಂತರರಾಜ್ಯ ವಲಸೆ ಕೆಲಸಗಾರರ (ಉದ್ಯೋಗಕ್ರಮೀಕರಣ ಮತ್ತು ಸೇವಾ ಷರತ್ತು) ಕಾಯ್ದೆ 1979 ರಡಿಯಲ್ಲಿ ನೋಂದಣಿ, ಅಂತರರಾಜ್ಯ ವಲಸೆ ಕೆಲಸಗಾರರ (ಉದ್ಯೋಗ ಕ್ರಮೀಕರಣ ಮತ್ತು ಸೇವಾ ಷರತ್ತು) ಕಾಯ್ದೆ 1980 ರಡಿಯಲ್ಲಿ ಪರವಾನಗಿ, ಬೀಡಿ ಮತ್ತು ಸಿಗಾರ್ (ಸೇವಾ ಷರತ್ತುಗಳು) ಕೆಲಸಗಾರರ ಕಾಯ್ದೆ, 1966 ರಡಿಯಲ್ಲಿ ಕೈಗಾರಿಕಾ ಕಟ್ಟಡಕ್ಕೆ ಪರವಾನಗಿ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ದೊರೆಯುವ ಸೌಲಭ್ಯಗಳಾದ ಅಂತ್ಯಸಂಸ್ಕಾರ ಮತ್ತು ಅಪಘಾತ ಮರಣ ಪರಿಹಾರದ ಅರ್ಜಿಗಳ ವಿಲೇವಾರಿ ಮಾಡಲಾಗುತ್ತದೆ.

Also Read  ಮಲ್ಪೆ : ಬೀಚ್ ನಲ್ಲಿ ಮುಳುಗಿದ ಯುವಕ ಯುವತಿಯ ರಕ್ಷಣೆ

 

ಹೆಚ್ಚಿನ ಮಾಹಿತಿಗಾಗಿ ಸಹಾಯಕ ಕಾರ್ಮಿಕ ಆಯುಕ್ತರ ಕಛೇರಿ, ಮಂಗಳೂರು, 2ನೇ ಮಹಡಿ, ಪ್ರಕೃತಿ ಕಮರ್ಷಿಯಲ್ ಕಾಂಪ್ಲೆಕ್ಸ್, ಬಂಟ್ಸ್ ಹಾಸ್ಟೆಲ್ ಬಳಿ, ಕದ್ರಿ ರಸ್ತೆ, ಮಂಗಳೂರು ಹಾಗೂ ದೂರವಾಣಿ ಸಂಖ್ಯೆ: 0824-2437479 ಯನ್ನು ಸಂಪರ್ಕಿಸಬಹುದು ಎಂದು  ಮಂಗಳೂರು ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತರು ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.

Also Read  ಭಾರೀ ಗಾಳಿ‌-ಮಳೆಗೆ ತತ್ತರಿಸಿದ ಕರಾವಳಿ ► ಮಂಗಳೂರು ನಗರ ಪ್ರದೇಶ ಜಲಾವೃತ

 

error: Content is protected !!
Scroll to Top