ಸುಳ್ಯ :ಸೈಕಲ್ ಕಲಿಯಲು ತೆರಳಿದ್ದ ಬಾಲಕಿಗೆ ಶಾಲಾ ಆಡಳಿತಾಧಿಕಾರಿಯಿಂದ ಲೈಂಗಿಕ ಕಿರುಕುಳ

(ನ್ಯೂಸ್ ಕಡಬ) newskadaba.com ಸುಳ್ಯ, ಡಿ.14: ಸೈಕಲ್ ಕಲಿಯಲು ತೆರಳಿದ್ದ ಬಾಲಕಿಗೆ ಶಾಲಾ ಆಡಳಿತಾಧಿಕಾರಿ ಲೈಂಗಿಕ ಕಿರುಕುಳ ನೀಡಿದ ಘಟನೆ ಸುಳ್ಯದಲ್ಲಿ ನಡೆದಿದೆ. ದೇವಚಳ್ಳ ಗ್ರಾಮದ ಎಲಿಮಲೆ ಎಂಬಲ್ಲಿ ಸೈಕಲ್ ಕಲಿಯಲು ಹೋದ ಬಾಲಕಿಯೊಬ್ಬಳನ್ನು ಕೊಠಡಿಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಶಾಲಾ ಆಡಳಿತಾಧಿಕಾರಿಯನ್ನು ವಜಾಗೊಳಿಸಲಾಗಿದೆ.

ಎಲಿಮಲೆಯ ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿ ಬಾಲಕಿಯೊಬ್ಬಲು ತನ್ನ ಗೆಳತಿ ಜತೆ ಸೈಕಲ್ ಕಲಿಯುತ್ತಿದ್ದ ವೇಳೆ ಶಾಲೆಯಲ್ಲಿದ್ದ ಆಡಳಿತಾಧಿಕಾರಿ ಬಾಲಕಿಯನ್ನು ಕರೆದು ಸೈಕಲ್ ಕೊಡಿಸುವುದಾಗಿ ತಿಳಿಸಿ, ಬಳಿಕ ಕೊಠಡಿಗೆ ಕರೆದೊಯ್ದು ಆಕೆಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ತಿಳಿದುಬಂದಿದೆ.  ಬಾಲಕಿ ಈ ವಿಚಾರವನ್ನು ಪೋಷಕರಿಗೆ ತಿಳಿಸಿದ್ದು, ಪೋಷಕರು ಆಡಳಿತ ಮಂಡಳಿಗೆ ದೂರು ನೀಡಿದ್ದಾರೆ. ಪ್ರಕರಣ ಸಂಬಂಧ ಶಾಲಾ ಆಡಳಿತಾಧಿಕಾರಿಯನ್ನು ಸೇವೆಯಿಂದ ವಜಾಗೊಳಿಸಲಾಗಿದೆ.

Also Read  ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ: ಹಲವರಿಗೆ ಗಾಯ

 

 

error: Content is protected !!
Scroll to Top