ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 88ನೇ ಸರ್ವ ಧರ್ಮ ಸಮ್ಮೇಳನ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಡಿ.14: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ ಸಂಭ್ರಮ‌ ನಡೆಯುತ್ತಿದ್ದು, ಮೂರನೇ ದಿನದ ಅಂಗವಾಗಿ ಡಿ.13ರಂದು  88ನೇ ಸರ್ವ ಧರ್ಮ ಸಮ್ಮೇಳನ ಜರುಗಿತು.

ವಸತಿ ಸಚಿವ ವಿ. ಸೋಮಣ್ಣ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ವಿಶ್ವದಲ್ಲೇ ಅತಿ ಶ್ರೇಷ್ಠ ಧಾರ್ಮಿಕ ಕೇಂದ್ರವಾಗಿದೆ. ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಎಲ್ಲರಿಗೂ ಆದರ್ಶಪ್ರಾಯರು. ಪ್ರಧಾನಿ ನರೇಂದ್ರ ಮೋದಿಯವರಿಗೂ ಡಾ.ಹೆಗ್ಗಡೆ ಯವರು ಅಚ್ಚುಮೆಚ್ಚಿನವರಾಗಿದ್ದಾರೆ.ಡಾ.ಡಿ. ವೀರೇಂದ್ರ ಹೆಗ್ಗಡೆಯವರಿಗೆ ಭಾರತ ರತ್ನ ಪುರಸ್ಕಾರ ಸಿಗಬೇಕೆಂಬುದು ಕೋಟ್ಯಂತರ ಭಕ್ತಾದಿಗಳ ಆಶಯ. ಅವರಿಗೆ “ಭಾರತ ರತ್ನ” ಕೊಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದು ಹೇಳಿದರು.

Also Read  ದಕ್ಷಿಣ ಕನ್ನಡದ ಈ ಗ್ರಾಮಾದಲ್ಲಿಒಂದೇ ಒಂದು ಕೊರೊನಾ ಪ್ರಕರಣ ವರದಿಯಾಗಿಲ್ಲ..!?

 

 

error: Content is protected !!
Scroll to Top