ಮಂಗಳೂರು :ಅಂಗಡಿಯ ಚಾವಣಿಯ ಹೆಂಚು ತೆಗೆದು ಒಳಹೊಕ್ಕ ಕಳ್ಳರು.!



(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.12: ಹಳೆಯಂಗಡಿ ಮೀನು ಮಾರುಕಟ್ಟೆ ಸಮೀಪದ ಅಂಗಡಿಗೆ ಕಳ್ಳರು ಕನ್ನ ಹಾಕಿರುವ ಘಟನೆ ಡಿ.11 ರ ಕಳೆದ ರಾತ್ರಿ ನಡೆದಿದೆ.





ಹಳೆಯಂಗಡಿಯ ಮುದ್ದು ಸಾಲ್ಯಾನ್ ಎಂಬವರ ಅಂಗಡಿಯ ಚಾವಣಿಯ ಹೆಂಚು ತೆಗೆದು ಒಳಹೊಕ್ಕ ಕಳ್ಳರು, ನಗದು ಹಾಗೂ ಕೆಲ ವಸ್ತುಗಳನ್ನು ಕದ್ದೊಯ್ದಿದ್ದಾರೆ.ಮುದ್ದು ಸಾಲ್ಯಾನ್ ಇಂದು ಬೆಳಗ್ಗೆ ಅಂಗಡಿ ತೆರೆದಾಗ ಕಳವು ಅರಿವಿಗೆ ಬಂದಿದೆ. ಮುಲ್ಕಿ ಠಾಣೆ ಪೊಲೀಸರು ಸ್ಥಳಕ್ಕೆ‌ ಭೇಟಿ ಪರಿಶೀಲನೆ‌ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.






 

 

 

error: Content is protected !!
Scroll to Top