ರಾಜ್ಯದಲ್ಲಿ ವೈದ್ಯಕೀಯ ಕಾಲೇಜುಗಳು ನಾಳೆಯಿಂದ ಪುನಾರಂಭ

(ನ್ಯೂಸ್ ಕಡಬ) newskadaba.com ಬೆಂಗಳೂರು . 30: ಕೋವಿಡ್-19 ಕಾರಣಗಳಿಂದ ಕಳೆದ ಎಂಟು ತಿಂಗಳಿನಿಂದ ಮುಚ್ಚಲ್ಪಟ್ಟಿದ್ದ ವೈದ್ಯಕೀಯ ಕಾಲೇಜುಗಳು ರಾಜ್ಯದಲ್ಲಿ  ನಾಳೆಯಿಂದ ಆರಂಭವಾಗಲಿದ್ದು, ಕೇಂದ್ರ ಸರ್ಕಾರದ ಕೋವಿಡ್ ನಿಯಂತ್ರಣ ಮಾರ್ಗಸೂಚಿಗಳನ್ನು ಅನುಸರಿಸಿ ವೈದ್ಯಕೀಯ ಕಾಲೇಜುಗಳನ್ನು ಆರಂಭಿಸುವಂತೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕಾಲೇಜುಗಳಿಗೆ ಸೂಚನೆ ನೀಡಿದೆ.

 

 

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಎಲ್ಲ ಸಂಯೋಜಿತ ವೈದ್ಯಕೀಯ ಕಾಲೇಜುಗಳನ್ನು ಡಿಸೆಂಬರ್ 1 ರ ಮಂಗಳವಾರದಂದು ಪುನಾರಂಭಗೊಳಿಸಿ ತಕ್ಷಣವೇ ಪ್ರಾಯೋಗಿಕ ತರಗತಿಗಳನ್ನು ನಡೆಸುವ ಬಗ್ಗೆ ಗಮನ ಹರಿಸಬೇಕು. ವಿದ್ಯಾರ್ಥಿಗಳಿಗೆ ಪಠ್ಯ ಬೋಧನೆಯನ್ನು ಆನ್ ಲೈನ್ ಶಿಕ್ಷಣ ಮತ್ತು ಭೌತಿಕ ತರಗತಿ ಹಾಜರಾತಿ ಎರಡೂ ರೀತಿಯಲ್ಲೂ ನಡೆಸಬಹುದು ಎಂದು ತಿಳಿಸಿದೆ. ಪದವಿ ಕಾಲೇಜುಗಳ ಮಾದರಿಯಲ್ಲೇ ವಿದ್ಯಾರ್ಥಿಗಳು, ಪ್ರಾಧ್ಯಪಕರು ಮತ್ತು ಇತರ ಸಿಬ್ಬಂದಿ ಕಾಲೇಜಿಗೆ ಬರುವ ಮುನ್ನ ಕಡ್ಡಾಯವಾಗಿ ಕರೊನಾ ಪರೀಕ್ಷೆ ಮಾಡಿಸಿಕೊಂಡು ನೆಗೆಟಿವ್ ವರದಿಯೊಂದಿಗೆ ಹಾಜರಾಗಬೇಕು ಹಾಗೂ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಲು ಸರ್ಕಾರದ ಆದೇಶದ ಪ್ರಕಾರ ಪಾಲಕರ ಲಿಖಿತ ಅನುಮತಿ ಪತ್ರ ತರಬೇಕು ಎಂದು ಆರ್ ಜಿಯುಎಚ್ ಎಸ್ ತಿಳಿಸಿದೆ.

Also Read  ಹೆಚ್ಚಾಗಿ ಲವ್ ಮಾಡಿ ಮದುವೆ ಆಗುತ್ತಾರೆ ಈ 5 ರಾಶಿಯವರು!ನಿಜವಾದ ಪ್ರೀತಿ ಇವರಿಗೆ ಸಿಗುತ್ತದೆ. ನಿಮ್ಮ ರಾಶಿ ಇದ್ದೀಯ ತಿಳಿದುಕೊಳ್ಳಿ

 

error: Content is protected !!
Scroll to Top