ಕುದುರೆ ರೇಸ್ ಜೂಜು ➤ ನಾಲ್ವರು ಆರೋಪಿಗಳು ಖಾಕಿ ಬಲೆಗೆ

(ನ್ಯೂಸ್ ಕಡಬ) newskadaba.com ಬೆಂಗಳೂರು . 27: ಸಿಸಿಬಿ ಪೊಲೀಸರು ಕುದುರೆ ರೇಸ್ ಜೂಜು ಆಡುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿ 20 ಲಕ್ಷ ರೂಪಾಯಿ ಹಾಗೂ ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಶಕ್ಕೆ ಪಡೆದುಕೊಂಡ ಆರೋಪಿಗಳನ್ನು ವಿಜಯ ನಗರದ ಸತ್ಯನಾರಾಯಣ,ಕುಮಾರ, ಶ್ರೀಕಾಂತ್ ಹಾಗೂ ಶೇಷಾದ್ರಿಪುರಂ ನಿವಾಸಿ ಸಂದೀಪ್ ಎಂದು ಗುರುತಿಸಲಾಗಿದೆ.

 

 

ಆರ್ ಪಿ ಸಿ ಬಡಾವಣೆಯ ಮನೆಯೊಂದರಲ್ಲಿ ಬೆಟ್ಟಿಂಗ್ ಕಟ್ಟಿ ಆಡುತ್ತಿರುವ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿ 20 ಲಕ್ಷ ರೂ ಹಾಗೂ ಆರು ಮೊಬೈಲ್ ನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಯಾವುದೇ ಅನುಮತಿ ಇಲ್ಲದೇ ಸಾರ್ವಜನಿಕರಿಂದ ಅಕ್ರಮವಾಗಿ ಬೆಟ್ಟಿಂಗ್ ಹಣ ಕಟ್ಟಿಕೊಂಡಿದ್ದಾರೆ. ಈ ಬಗ್ಗೆ ವಿಜಯ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  4 ವರ್ಷದ ಬಾಲಕನಿಗೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಿದ ಇಂಜಿನಿಯರಿಂಗ್ ವಿದ್ಯಾರ್ಥಿ

 

error: Content is protected !!
Scroll to Top