ಶೌರ್ಯ ಪ್ರಶಸ್ತಿ ಪುರಸ್ಕೃತ ಕೊರೋನಾ ವಾರಿಯರ್‍ ಡಾ. ಪಿ.ಆರ್.ಎಸ್.ಚೇತನ್ ರವರಿಗೆ‌ ಸನ್ಮಾನ

(ನ್ಯೂಸ್ ಕಡಬ) newskadaba.com ಮಂಗಳೂರು . 26: ಕೋವಿಡ್ ಸಂದರ್ಭ ದೇಶದೆಲ್ಲೆಡೆ ರಕ್ಷಣಾ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರವಹಿಸಿದ ,ರಾಷ್ಟ್ರಪತಿಗಳಿಂದ ಶೌರ್ಯ ಪ್ರಶಸ್ತಿ ಪಡೆದ ಕೊರೋನಾ ವಾರಿಯರ್‍ಸ್ ಡಾ. ಪಿ.ಆರ್.ಎಸ್.ಚೇತನ್‌ರಿಗೆ ಮಂಗಳೂರಿನಲ್ಲಿ ಸನ್ಮಾನ ಮಾಡಲಾಯಿತು ಪ್ರಶಸ್ತಿಗಳ ಸರದಾರ ರಾಷ್ಟ್ರದ ಅತ್ಯೂನ್ನತ ಪ್ರಶಸ್ತಿಯಾದ ಶೌರ್ಯ ಪ್ರಶಸ್ತಿ ಪಡೆದ ಕೊರೋನಾ ವಾರಿಯರ್‍ಸ್ ಇವರಾಗಿದ್ದಾರೆ .

ಕೊರೋನಾ ಸೈನಿಕ್ ಟಾಸ್ಕ್ ಫೋರ್‍ಸ್‌ನ ಚೆಯರ್ ಪರ್ಸನ್ ಹಾಗೂ ಕಮಂಡಿಗ್ (HQ & Ops ) ಸಿವಿಲ್ ಡಿಫೆನ್ಸ್‌ನ ಸಹಾಯಕ ಮುಖ್ಯ ಅಧಿಕಾರಿ ಲಯನ್.ಡಾ. ಪಿ.ಆರ್.ಎಸ್.ಚೇತನ್ ಅವರ ಸತತ ಸಾಧನೆಗಾಗಿ ಲಯನ್ಸ್ ಜಿಲ್ಲೆ 317ಡಿ ವತಿಯಿಂದ ಗೌರವಿಸಲಾಯಿತು.ಲಯನ್ಸ್ ಜಿಲ್ಲೆ 317.ಡಿ ವತಿಯಿಂದ ಸುಮಾರು 20 ಲಕ್ಷ ರೂ. ಮೌಲ್ಯದ ಕೋವಿಡ್ ಸಲಕರಣೆಗಳನ್ನು ನಗರದ ಲೇಡಿಗೋಷನ್ ಸರ್ಕಾರಿ ಆಸ್ಪತ್ರೆ ಹಾಗೂ ಇನ್ನಿತರ ಸರ್ಕಾರಿ ಆಸ್ಪತ್ರೆಗಳಿಗೆ ಹಸ್ತಾಂತರ ಮಾಡುವ ಕಾರ್ಯಕ್ರಮದಲ್ಲಿ ಗೌರವಿಸಿದ್ದಾರೆ.

ಕೋವೀಡ್ ಆರಂಭವಾದ ದಿನದಿಂದ ಸೋಂಕಿತರ ಹಾಗೂ ಅವರ ಕುಟುಂಬಗಳಿಗೆ ಒಂದುವರೆ ಕೋಟಿಗೂ ಹೆಚ್ಚು ಅಹಾರ ಒದಗಿಸಿದಂತಹ, ನೆರೆ ಹಾವಾಳಿ ಸಂದರ್ಭ ದೇಶದೆಲ್ಲೆಡೆ ರಕ್ಷಣಾ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರವಹಿಸಿದ ಸಾಹಸಿ, ತಮ್ಮ ಸತತ ಸಾಧನೆಗಳಿಗಾಗಿ ರಾಷ್ಟ್ರಪ್ರಶಸ್ತಿ, ರಾಜ್ಯ ಪ್ರಶಸ್ತಿ, ಮುಖ್ಯಮಂತ್ರಿ ಪದಕ ಸಹಿತಾ ನೂರಾರು ಪ್ರಶಸ್ತಿಗಳನ್ನು ಪಡೆದಿರುವಂತಹ ಬಹುದೊಡ್ಡ ಸಾಧಕ, ರಾಷ್ಟ್ರದ ಅತ್ಯೂನ್ನತ ಪ್ರಶಸ್ತಿಯಾದ ಶೌರ್ಯ ಪ್ರಶಸ್ತಿ ಪಡೆದಂತಹ, ಮಾನವೀಯ ಸಂಬಂಧಗಳಿಗೆ ಹೆಚ್ಚು ಬೆಲೆ ಕೊಡುವ ಲಯನ್.ಡಾ. ಪಿ.ಆರ್.ಎಸ್.ಚೇತನ್ ಅವರನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಂಗಳೂರು ದಕ್ಷೀಣ ಶಾಸಕ ವೇದವ್ಯಾಸ ಕಾಮಾತ್, ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ, ಸ್ಥಳೀಯ ಮನಪಾ ಸದಸ್ಯೆ ಪೂರ್ಣಿಮಾ, ಲಯನ್ಸ್ ಕ್ಲಬ್ ಜಿಲ್ಲೆ 317.ಡಿ ಇದರ ಜಿಲ್ಲಾ ರಾಜ್ಯಪಾಲಕ ಲಯನ್ ಡಾ. ಗೀತಾ ಪ್ರಕಾಶ್ ಎ., ಮಲ್ಟಿಪಲ್ ಕೌನ್ಸಿಲ್ ಚೆಯರ್‌ಮೆನ್ ಲಯನ್ ಡಾ.ನಾಗರಾಜ್ ವಿ.ಬೈರಿ ಮುಂತಾದವರು ಸನ್ಮಾನಿಸಿ, ಗೌರವಿಸಿದರು.

Also Read  ಸುಧಾರಣೆ ಕಾಣದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆರೋಗ್ಯ

ನಗರದ ಜಿಲ್ಲಾ ಸರ್ಕಾರಿ ಲೇಡಿಗೋಷನ್ ಆಸ್ಪತ್ರೆಯ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ.ದುರ್ಗಾ ಪ್ರಸಾದ್, ಜಿಲ್ಲಾ ಪ್ರಥಮ ವಿಡಿಜಿ ಲಯನ್ ವಸಂತ್ ಕುಮಾರ್ ಶೆಟ್ಟಿ, ಜಿಲ್ಲಾ ಲಯನ್ ಸಿ.ಪಿ. ದಿನೇಶ್, ಜಿಲ್ಲಾ ಕೋಶಾಧಿಕಾರಿ ಲಯನ್ ಮೊಹಮ್ಮದ್ ಇಕ್ಬಾಲ್, ಲಯನ್ಸ್ ಜಿಲ್ಲಾ ಸಂಪುಟ ಸೇವಾ ಸಂಯೋಜಕರಾದ ಜಿ.ಆರ್.ಶೆಟ್ಟಿ, ಹೆಚ್ಚುವರಿ ರಾಜ್ಯಪಾಲರ ಸಹ ಸಂಯೋಜಕ ವಿ.ಗಂಗಾಧರ್, ನಿಕಟ ಪೂರ್ವ ರಾಜ್ಯಪಾಲರಾದ ಜೆ.ಕೆ.ರಾವ್, ಜಿಲ್ಲಾ ಸಂಚಾಲಕ ಲ. ಪ್ರವೀಣ್ ಶೆಟ್ಟಿ, ಸಾರ್ವಜನಿಕ ಸಂಪರ್ಕಧಿಕಾರಿ  ಲ| ವಿಟ್ಲ ಮಂಗೇಶ್ ಭಟ್, ಜಿಎಸ್‌ಟಿ ವಿಭಾಗದ ಚೆಯರ್‌ಮೆನ್ ಬ್ರಹ್ಮಂಮ್ ಮುಂತಾದವರು ಈ ವೇಳೆ ಉಪಸ್ಥಿತರಿದ್ದರು.

Also Read  ಗಾಂಜಾ ಮಾರಾಟ ಪ್ರಕರಣ ➤ ಬಂಧಿತರಿಗೆ 2 ವರ್ಷ ಜೈಲು ಶಿಕ್ಷೆ ಪ್ರಕಟ

ಸನ್ಮಾನ ಸ್ವೀಕರಿಸಿ ಮಾತನಾಡಿದ ಲಯನ್.ಡಾ. ಪಿ.ಆರ್.ಎಸ್.ಚೇತನ್ ಅವರು, ಕೊರೋನಾ ಎರಡನೇ ಅಲೆಯ ಸಾಧ್ಯತೆ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದು, ಸಾರ್ವಜನಿಕರು ಈಗಿನಿಂದಲೇ ಈ ಬಗ್ಗೆ ಮುನ್ನೇಚರಿಕೆ ವಹಿಸಬೇಕು. ಎರಡನೇ ಅಲೆ ಮೊದಲಿಗಿಂತ ಜಾಸ್ತಿ ಪರಿಣಾಮಕಾರಿಯಾಗುವ ಲಕ್ಷಣವನ್ನು ಹೊಂದಿದೆ. ಈ ಬಗ್ಗೆ ನಾವು ತುಂಬಾ ಮುನ್ನೇಚರಿಕೆ ವಹಿಸಬೇಕಾದ ಅಗತ್ಯವಿದೆ. ಅದಕ್ಕಾಗಿ ಈಗಿನಿಂದಲೇ ಜನರಿಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ಹೇಳಿದರು.
ಲಯನ್ಸ್ ಕ್ಲಬ್ ಜಿಲ್ಲೆ 317ಡಿ ಇದರ ಜಿಲ್ಲಾ ರಾಜ್ಯಪಾಲಕರಾದ ಲಯನ್ ಡಾ. ಗೀತಾ ಪ್ರಕಾಶ್ ಎ. ಅವರ ಉತ್ತಮ ನಾಯಕತ್ವದಲ್ಲಿ ಅವರ ಲಯನ್ಸ್ ತಂಡ ಕೋವಿಡ್ ವಿಚಾರದಲ್ಲಿ ಉತ್ತಮ ಕೆಲಸ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಇದಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

error: Content is protected !!
Scroll to Top