ಸವಣೂರು: ಹಿಂಸಾತ್ಮಕವಾಗಿ ಗೋ ಸಾಗಾಟ ➤ ವಾಹನ ಸಹಿತ 2 ಗೋವುಗಳು ಪೊಲೀಸರ ವಶಕ್ಕೆ

(ನ್ಯೂಸ್ ಕಡಬ) newskadaba.com ಸವಣೂರು . 23: ಕಳೆದ ದಿನ ರಾತ್ರಿ ಸವಣೂರಿನಲ್ಲಿ ಮಹೀಂದ್ರ ವಾಹನದಲ್ಲಿ ದನಗಳನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿದ್ದಾಗ ಬೆಳ್ಳಾರೆ ಪೊಲೀಸರು ವಾಹನವನ್ನು ತಡೆದು ನಿಲ್ಲಿಸಿ ವಾಹನ ಸಹಿತ ಎರಡು ದನಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ನಡೆದಿದೆ.

 

 

ಯಾವುದೇ ಪರವಾನಿಗೆ ಇಲ್ಲದೇ ದನ ಸಾಗಾಟ ಮಾಡುತ್ತಿದ್ದ ಕೃಷ್ಣ ಭಟ್ ಪಿ. ಮೊಟ್ಟೆತ್ತಡ್ಕ ಹಾಗೂ ಶಿವಪ್ರಸಾದ್ ಎಂಬವರು ಕಾಂಚನದಿಂದ ದನವನ್ನು ಖರೀದಿಸಿ ಪುರುಷರಕಟ್ಟೆಗೆ ಒಂದೇ ವಾಹನದಲ್ಲಿ ಎರಡು ದೊಡ್ಡ ದನಗಳನ್ನು ಸಾಗಿಸುತ್ತಿದ್ದುದ್ದನ್ನು ಕಂಡು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆಗೆ ಟ್ವಿಸ್ಟ್ ➤ ಬಸ್ ನಿರ್ವಾಹಕ ಅರೆಸ್ಟ್

 

Xl

 

error: Content is protected !!
Scroll to Top