ಸಂಪ್ರದಾಯಬದ್ಧವಾಗಿ ಕುಕ್ಕೆ ಸುಬ್ರಹ್ಮಣ್ಯ ಷಷ್ಠಿ ನಡೆಯಲಿದೆ ➤ಸಚಿವ ಕೋಟ ಶ್ರೀನಿವಾಸ ಪೂಜಾರಿ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ . 23: ಪೂರ್ವಶಿಷ್ಠ ಸಂಪ್ರದಾಯಗಳಿಗೆ ಅನುಗುಣವಾಗಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಚಂಪಾ ಷಷ್ಠಿ ಜಾತ್ರೋತ್ಸವ ನಡೆಯಲಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

 

 

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭಾನುವಾರ ಆಗಮಿಸಿ ಶ್ರೀ ದೇವರ ದರ್ಶನ ಬಳಿಕ ಮಾತನಾಡಿದ ಅವರು, ಪರಂಪರೆ ಮತ್ತು ಸಂಪ್ರದಾಯಗಳಿಗೆ ಧಕ್ಕೆ ಬಾರದಂತೆ ಕೋವಿಡ್‌ ನಿಯಮಗಳಿಗೆ ಅನುಗುಣವಾಗಿ ಜಾತ್ರೋತ್ಸವ ನಡೆಯಲಿದೆ. ಈ ಹಿಂದೆ ಬ್ರಹ್ಮರಥೋತ್ಸವ ಸೇವೆ ನೆರವೇರಿಸಲು ಭಕ್ತರಿಗೆ ಅವಕಾಶವಿತ್ತು. ಆದರೆ ಈ ಬಾರಿ ಕೋವಿಡ್‌ ಹಿನ್ನೆಲೆಯಲ್ಲಿ ಬ್ರಹ್ಮರಥೋತ್ಸವ ಸೇವೆ ನೆರವೇರಿಸಲು ಭಕ್ತರಿಗೆ ಅವಕಾಶವಿಲ್ಲ. ಪರಂಪರೆ, ಕಟ್ಟುಪಾಡು, ಸಂಪ್ರದಾಯವನ್ನು ಪಾಲಿಸಿಕೊಂಡು ಕೋವಿಡ್‌ ನಿಯಮಗಳನ್ನು ಅನುಸರಿಸಿ ಕುಕ್ಕೆ ಜಾತ್ರೆ ನಡೆಯಲಿದೆ ಎಂದರು.

Also Read  ಕಡಬ ಒಕ್ಕಲಿಗ ಗೌಡ ಸೇವಾ ಸಂಘದ ವತಿಯಿಂದ ಸರಕಾರಿ, ಸರಕಾರೇತರ ನೌಕರರ ಸ್ನೇಹಕೂಟ-ಸಮಿತಿ ರಚನೆ

 

 

error: Content is protected !!
Scroll to Top