(ನ್ಯೂಸ್ ಕಡಬ) newskadaba.com ಉಡುಪಿ ನ. 20: ಉಡುಪಿಯ ಶಿರ್ವ ಬಳಿಯ ಮುಖ್ಯ ರಸ್ತೆಯ ಸೈಕಲ್ ಅಂಗಡಿಯ ಮುಂಭಾಗವೇ ಯುವಕನೋರ್ವ ನೇಣು ಬಿಗಿದು ಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ವಿವರೀತ ಕುಡಿತದ ಚಟ ಹೊಂದಿರುವ ಮಟ್ಟಾರು ನಿವಾಸಿ ಅಕ್ಷಯ್ ಪೂಜಾರಿ(35) ಗುರುವಾರ ರಾತ್ರಿ ವೇಳೆ ಆತ್ಮಹತ್ಯೆಗೆ ಗೆ ಶರಣಾದ ವ್ಯಕ್ತಿ. ಈ ಕುರಿತು ಶಿರ್ವ ಠಾಣೆಯಲ್ಲಿ ದೂರು ದಾಖಲಾಗಿದೆ. ಇನ್ನು ಈತನ ಆತ್ಮಹತ್ಯೆ ಗೆ ನಿಖರ ಕಾರಣ ಪೊಲೀಸರ ತನಿಖೆಯಿಂದಷ್ಟೆ ತಿಳಿದು ಬರಬೇಕಿದೆ.