ಮಂಗಳೂರು ಏರ್ ಪೋರ್ಟ್ : ಮಿಥುನ್ ರೈ ಘರ್ಜನೆಗೆ ಬೆದರಿದ ಅದಾನಿ ಗ್ರೂಪ್ ➤ ಪಿಲಿನಲಿಕೆ ಆಕೃತಿ 24 ಗಂಟೆಯೊಳಗಡೆ ಮತ್ತೆ ಮೂಲ ಸ್ಥಾನಕ್ಕೆ

(ನ್ಯೂಸ್ ಕಡಬ) newskadaba.com ಮಂಗಳೂರು . 20: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅದಾನಿ ಕಂಪೆನಿಯ ಆನೆಯ ಚಿಹ್ನೆ ತೆರವು ಮಾಡಿ ಹಿಂದೆ ಇದ್ದ  ಪಿಲಿನಲಿಕೆ (ಹುಲಿ ಕುಣಿತದ) ಚಿಹ್ನೆ ಯನ್ನು ತಕ್ಷಣ ಅಳವಡಿಸಬೇಕು ಎಂದು ಮಿಥುನ್ ರೈ ಆಗ್ರಹಿಸಿದ್ದರು.  ತೆರವು ಗೊಳಿಸದೇ ಇದ್ದಲ್ಲಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನು ನೀಡಿದ್ದರು.

 

ವಿಮಾನ ನಿಲ್ದಾಣಕ್ಕೆ ತುಳುನಾಡಿನ ವೀರರಾದ ಕೋಟಿ -ಚೆನ್ನಯರ ಹೆಸರು ನಾಮಕರಣ ಮಾಡಬೇಕು. ವಿಮಾನ ನಿಲ್ದಾಣಕ್ಕೆ ಅದಾನಿ ಹೆಸರು ನಾಮಕರಣ ಮಾಡಿರುವುದನ್ನು ಕೂಡಲೇ ಹಿಂಪಡೆಯಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್‌ ರೈ ಆಗ್ರಹಿಸಿದರು. ಇದೀಗಾ ಕಾಂಗ್ರೇಸ್ ಮುಖಂಡ ಮಿಥುನ್ ರೈ ರವರ ಘರ್ಜನೆಗೆ ಬೆದರಿದ ಅದಾನಿ ಗ್ರೂಪ್ ,  ಪಿಲಿನಲಿಕೆ ಆಕೃತಿಯನ್ನು ಮತ್ತೆ ಅದೇ ಮೂಲ ಸ್ಥಾನಕ್ಕೆ ತಂದಿದೆ. ಈ ಬೆಳವಣಿಗೆ ತುಳು ಸಂಸ್ಕøತಿಯನ್ನು ಆರಾಧಿಸುವ ಅಸಂಖ್ಯಾತ ತುಳುವರಿಗೆ ಹರ್ಷ ತಂದಿದೆ. ಆನೇಕ ತುಳು ಸಂಘ ಸಂಸ್ಥೆಗಳು ಕಾಂಗ್ರೇಸ್ ಮುಖಂಡ ಮಿಥುನ್ ರೈ ಯವರಿಗೆ ಧನ್ಯವಾದ ತಿಳಿಸಿದ್ದಾರೆ.

Also Read  ವಿದ್ಯುತ್ ಸ್ಪರ್ಶಿಸಿ ನೆನಪಿನ ಶಕ್ತಿ ಕಳೆದುಕೊಂಡ ಬಾಲಕ

 

 

Xl

error: Content is protected !!
Scroll to Top