ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ವಿದ್ಯಾಭಾರತಿ ಕರ್ನಾಟಕದ ಸಹಯೋಗದಲ್ಲಿ ಶಿಕ್ಷಕರ ಪ್ರ-ಶಿಕ್ಷಣ ವರ್ಗ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಮಂಗಳೂರು, ನ.18. ಧ್ಯಾನ, ವೈದಿಕ ಕಾರ್ಯಗಳಲ್ಲಿ ಭಾರತಕ್ಕೆ ಪ್ರತಿಸ್ಪರ್ಧಿಗಳು ಯಾರೂ ಇಲ್ಲ ಮತ್ತು ಇತರ ರಾಷ್ಟ್ರಗಳಿಗೆ ಬೆಳಕು ಚೆಲ್ಲುತ್ತದೆ. ಅಂತಹ ಶ್ರೇಷ್ಠ ಸಂಸ್ಕಾರವನ್ನು ಹೊಂದಿದ ನಮ್ಮ ಪರಂಪರೆಯ, ಸಂಸ್ಕøತಿಯ ತಳಪಾಯ ನಮ್ಮ ಶಿಕ್ಷಣದ ಮೂಲಕ ವಿದ್ಯಾರ್ಥಿಗಳಿಗೆ ತಲುಪಬೇಕು ಎಂದು ಶಕ್ತಿನಗರದ ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ವಿದ್ಯಾಭಾರತಿ ಕರ್ನಾಟಕದ ಸಹಯೋಗದೊಂದಿಗೆ ನಡೆದ ಶಿಕ್ಷಕರ ಪ್ರ-ಶಿಕ್ಷಣ ವರ್ಗ ಎರಡು ದಿನಗಳ ಕಾರ್ಯಕ್ರಮವನ್ನು ಉದ್ಘಾಟಿಸಿದ ವಸಂತ ಮಾಧವ್, ಪ್ರಾಂತ ಕಾರ್ಯದರ್ಶಿ ವಿದ್ಯಾ ಭಾರತಿ ಕರ್ನಾಟಕ ಇವರು ಹೇಳಿದರು.


ಭಾರತೀಯ ಸಂಸ್ಕøತಿಯು ಪ್ರಾಚೀನವಾದುದೂ, ವಿಶ್ವಮಾನ್ಯವಾದುದ. ಅದರ ಉನ್ನತಿ ನಮ್ಮ ಕೈಯಲ್ಲಿದೆ. ಭಾರತದ ಪರಂಪರೆಯನ್ನು ನಮ್ಮ ಪೂರ್ವಿಕರು ಅವರ ಆಚಾರ, ವಿಚಾರ, ಜೀವನಶೈಲಿ, ಜ್ಞಾನ, ಧ್ಯಾನಗಳ ಮೂಲಕ ಬಹಳ ಶ್ರೀಮಂತಗೊಳಿಸಿದ್ದಾರೆ. ಅದು ಉಳಿಯಬೇಕಾದರೆ, ಭಾರತೀಯತೆ ನಮ್ಮ ಮನೆ ಮನೆಗಳಲ್ಲೂ ಬೆಳಗಬೇಕಾದರೆ, ನಮ್ಮ ಮನೆಯ ಮಕ್ಕಳಿಗೆ ಅದರ ಅರಿವು ಮೂಡಿಸಬೇಕಿದೆ. ಆ ಅರಿವನ್ನು ಮೂಡಿಸುವುದು ವಿದ್ಯಾ ಭಾರತಿಯಂತಹ ಶಿಕ್ಷಣ ಸಂಸ್ಥೆಗಳು. ಶಿಕ್ಷಣ ವಿದ್ಯಾರ್ಥಿಗಳಿಗೆ ಶಿಕ್ಷಣ ಜೀವನಾಧಾರವಾಗಿರದೆ ರಾಷ್ಟ್ರ ಭಕ್ತಿ, ರಾಷ್ಟ್ರಕ್ಕಾಗಿ ತ್ಯಾಗ, ಸೇವಾ ಮನೋಭಾವವನ್ನು ಮೈಗೂಡಿಸುವಂತಿರಬೇಕು ಮತ್ತು ಜೀವನುದುದ್ದಕ್ಕೂ ದೇಶದ ಬಗ್ಗೆ ಅಭಿಮಾನ, ಗೌರವ, ತುಂಬಿ, ಇತರರಿಗೆ ಮಾದರಿಯಾಗಿರಬೇಕು ಎಂದು ಮುಖ್ಯ ಅತಿಥಿ ವಿದ್ಯಾ ಭಾರತೀಯ ಕ್ಷೇತ್ರಿಯ ಸಹ ಸಂಘಟನಾ ಕಾರ್ಯದರ್ಶಿ ಜಿ.ಆರ್. ಜಗದೀಶ್ ಹೇಳಿದರು. ಮುಂದುವರೆದು ಭಾರತೀಯ ಸಂಸ್ಕಾರದಲ್ಲಿ ಪ್ರಕೃತಿ ಆರಾಧನೆ ಇದ್ದು ಪ್ರಾರ್ಥನೆಗಳು ಕೇವಲ ಬೇಡಿಕೆಗಳಾಗಿರದೆ, ಭಗವಂತನಲ್ಲಿ ಶರಣಾಗತಿಯ ಮನೋಭಾವನೆಯನ್ನು ಹೊಂದಿರಬೇಕು. ಹೊಸ ಶಿಕ್ಷಣ ನೀತಿಯೂ ಈ ಭಾವನೆಗಳಿಗೆ ಪೂರಕವಾಗಿದ್ದು, ಪ್ರಾರ್ಥನೆಯಲ್ಲಿ ತ್ಯಾಗ, ಸ್ನೇಹ, ಸಂಯಮಗಳಂತಹ ಗುಣಗಳನ್ನು ಬೇಡಿಕೊಳ್ಳುವ ಮೂಲಕ ಶಿಕ್ಷಣದಿಂದಲೂ ತ್ಯಾಗ, ಸ್ನೇಹ, ಸಂಯಮಗಳನ್ನು ತಿಳಿಯುವಂತಿರಬೇಕು ಎಂದರು.

Also Read  ಬೆಳ್ತಂಗಡಿ: 'ತಾಂಟ್ ರೆ ಬಾ ತಾಂಟ್' ಡೈಲಾಗ್ ಹೊಡೆದು ಯುವಕರಿಬ್ಬರಿಗೆ ಹಲ್ಲೆ ಪ್ರಕರಣ ➤ ಆರು ಮಂದಿಯ ಬಂಧನ

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಡಾ. ಕೆ.ಸಿ ನಾೈಕ್ ರವರು ಭಾರತೀಯ ವಿದ್ಯಾ ಸಂಸ್ಥೆಯ ಮೂಲಕ ನೀಡಲಾಗುವ ಶಿಕ್ಷಣವು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಲಿದೆ. ಇಲ್ಲಿನ ಶಿಕ್ಷಣ ವ್ಯವಸ್ಥೆ ಮತ್ತು ಪರಿಸರ ವಿದ್ಯಾರ್ಥಿಗಳಿಗೆ, ಶಿಕ್ಷಣಕ್ಕೆ ಪೂರಕವಾದ ವಾತಾವರಣವನ್ನು ಕಲ್ಪಿಸುತ್ತಿದೆ. ಅದರೊಂದಿಗೆ, ಇಂದಿನ ಹೊಸ ಶಿಕ್ಷಣ ನೀತಿಯನ್ನು ನಮ್ಮಲ್ಲಿ ಅಳವಡಿಸುವುದರಿಂದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಜಗತ್ತಿನಲ್ಲಿನ ಸವಾಲುಗಳನ್ನು ಎದುರಿಸಲು ಫಲಕಾರಿಯಾಗುತ್ತದೆ ಎಂದರು.

Also Read  ಕರಾವಳಿಯಲ್ಲಿ ಕೊರೋನಾ ರಣಕೇಕೆ ➤ ಒಂದೇ ದಿನ ಕರಾವಳಿಯಲ್ಲಿ 33 ಮಂದಿಗೆ ಕೊರೋನಾ ದೃಢ

ಕಾರ್ಯಕ್ರಮದಲ್ಲಿ ಶಕ್ತಿ ಪಪೂ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಸುಧೀರ್ ಎಂ.ಎಸ್, ಶಕ್ತಿ ರೆಸಿಡೆನ್ಶಿಂiÀಲ್ ಶಾಲೆಯ ಪ್ರಾಂಶುಪಾಲೆ ವಿದ್ಯಾ ಜಿ ಕಾಮತ್, ಶ್ರೀ ಗೋಪಾಲಕೃಷ್ಣ ಪ್ರಿ-ಸ್ಕೂಲ್ ಸಂಚಾಲಕಿ ನೀಮಾ ಸಕ್ಸೇನಾ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಕ್ತಿ ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ. ಪ್ರಸ್ತಾವನೆಯ ಮಾತುಗಳನ್ನು ನುಡಿದರು. ಅಧ್ಯಾಪಕ ಶರಣಪ್ಪ ಸ್ವಾಗತಿಸಿದರು. ಅಧ್ಯಾಪಕಿ ರೇಖಾ ಡಿ ಕೋಸ್ತಾ ವಂದಿಸಿದರು. ಅಧ್ಯಾಪಕಿ ಅಕ್ಷತ ಎಂ.ಜಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕ ಶಿಕ್ಷಕತೇರ ಸಿಬ್ಬಂದಿಗಳು ಭಾಗವಹಿಸಿ ಸಹಕರಿಸಿದರು.

error: Content is protected !!
Scroll to Top