ವಿಟ್ಲ : ರಫೀಕ್ ಕೆ ಎಂ ರವರಿಗೆ “ಮುಖ್ಯಮಂತ್ರಿಗಳ ಚಿನ್ನದ ಪದಕ”

(ನ್ಯೂಸ್ ಕಡಬ) newskadaba.com ವಿಟ್ಲ ನ. 18: ಕೆಲಿಂಜ ನಿವಾಸಿಯಾಗಿರುವ ಬೆಂಗಳೂರು ವಿವೇಕನಗರ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ರಫೀಕ್ ಕೆ.ಎಂ ಅವರಿಗೆ ಪೊಲೀಸ್ ಇಲಾಖೆಯ ಅತ್ತುತ್ತಮ ಸೇವೆಗಾಗಿ ನವೆಂಬರ್ 20 ರ ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ಬೆಂಗಳೂರು ವಿಧಾನಸೌಧದ ಬ್ಯಾಂಕ್ಚೆಟ್ ಹಾಲ್ ನಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ರಾಜ್ಯ ಸರಕಾರ ಕೊಡಮಾಡುವ ಮುಖ್ಯಮಂತ್ರಿಗಳ ಚಿನ್ನದ ಪದಕ ಪ್ರದಾನ ಮಾಡಲಿದ್ದಾರೆ.

ರಫೀಕ್ ಕೆ.ಎಂ ರವರು 15 ವರ್ಷಳಿಂದ ಪೊಲೀಸ್ ಸೇವೆಯಲ್ಲಿದ್ದು, ವೃತ್ತಿಯ ಪ್ರಾರಂಭದಲ್ಲಿ ಮೈಸೂರು ಜಿಲ್ಲೆಯ ಹುಣಸೂರು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಆಗಿ ಕೆಲಸ ಆರಂಭಿಸಿದರು. ನಂತರ ನಂಜನಗೂಡು ಪಿರಿಯಾಪಟ್ಟಣ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಕದ್ರಿ ಎಸ್. ಐ ಆಗಿ ಕರ್ತವ್ಯ ನಿರ್ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು . ಇವರು ವಿಟ್ಲ ಸಮೀಪದ ಕೆಲಿಂಜ ನಿವಾಸಿ ತೀರಾ ಸಾಮಾನ್ಯ ಕುಟುಂಬದ ಅಬ್ದುಲ್ ಖಾದರ್ ಹಾಗೂ ನೆಬಿಸ ದಂಪತಿ ಪುತ್ರರಾಗಿದ್ದಾರೆ. ಇದೀಗಾ ಇವರಿಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ರಾಜ್ಯ ಸರಕಾರ ಕೊಡಮಾಡುವ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.

error: Content is protected !!

Join the Group

Join WhatsApp Group