ಮುಲ್ಕಿ: ಶಿಕ್ಷಕಿಗೆ ಕಳಪೆ ಬೆಡ್‌ಶೀಟ್ ಮಾರಿ, ಯುವಕರಿಂದ ಸಾವಿರಾರು ರೂ. ವಂಚನೆ

(ನ್ಯೂಸ್ ಕಡಬ) newskadaba.com ಮುಲ್ಕಿ . 18: ಬಳ್ಕುಂಜೆ ಪ್ರದೇಶದಲ್ಲಿ ಇಬ್ಬರು ಬೆಡ್‌ಶೀಟ್ ಮಾರಿಕೊಂಡು ಟೀಚರ್ ಮನೆಗೆ ಬಂದು ಕಳಪೆ ಬೆಡ್‌ಶೀಟ್ ನೀಡಿ ಹಣ ವಂಚನೆ ಮಾಡಿದ ಘಟನೆ ನಡೆದಿದೆ. ಬಳ್ಕುಂಜೆಯ ತುಂಡುಪಡ್ಪು ಎಂಬಲ್ಲಿ ವಾಸವಿರುವ ಕರ್ನಿರೆ ಮೂಲದ ಟೀಚರ್ ಮನೆಗೆ ಆಗಮಿಸಿದ ಇಬ್ಬರು ಯುವಕರು ಬೆಡ್‌ಶೀಟ್ ಮಾರಾಟಕ್ಕೆಂದು ಬಂದು ವಂಚನೆ ಮಾಡಿದ್ದಾರೆ.

ಯುವಕರು ಸೀದಾ ಮನೆಯೊಳಗೆ ಬಂದು ಟೀಚರ್ ಅವರ ಕಾಲಿಗೆ ನಮಸ್ಕರಿಸಿ ನಾವು ನಿಮ್ಮ ಶಿಷ್ಯಂದಿರು, ಕಟೀಲು ನೇಕಾರ ಸೌಧದಿಂದ ಬಂದಿದ್ದೇವೆ ಎಂದೆಲ್ಲ ಹೇಳಿ, ಕೂಡಲೇ ಪೇಟೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕಿಯ ಪತಿಯವರನ್ನು ಕರೆಸಿ ಸುಮಾರು 10 ಜೋಡಿ ಬೆಡ್‌ಶೀಟ್‌ಗಳನ್ನು 9,500 ರೂ.ಗೆ ಕೊಟ್ಟು ಶಿಕ್ಷಕಿಯನ್ನು ಮೋಸ ಮಾಡಿದ್ದಾರೆ. ಯುವಕರು ಹೋದ ಮೇಲೆ ಮೋಸ ಹೋದ ಬಗ್ಗೆ ತಿಳಿದು ಬಂದಿದೆ. ಯುವಕರು ಮೋಸ ಮಾಡಿಕೊಟ್ಟ ಬೆಡ್ ಶೀಟ್ ಗಳ ಬೆಲೆ ಹೆಚ್ಚೆಂದರೆ 2,000 ರೂ. ಮೌಲ್ಯದ್ದು. ಈ ಬಗ್ಗೆ ಶಿಕ್ಷಕರು ಮುಲ್ಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Also Read  ಗೂಡುದೀಪದಲ್ಲಿ ಕೊರೊನಾ ಜಾಗೃತಿ ➤ ಹಲವರ ಗಮನ ಸೆಳೆಯುತ್ತಿದೆ ಈ ಗೂಡುದೀಪ

Xl

error: Content is protected !!
Scroll to Top