K S R T C ಗೆ ಕೋವಿಡ್ ಸಂಕಷ್ಟ ➤ಆದ್ರೂ ಸದ್ಯಕ್ಕಿಲ್ಲ ಟಿಕೆಟ್ ದರ ಏರಿಕೆ

(ನ್ಯೂಸ್ ಕಡಬ) newskadaba.com ಬೆಂಗಳೂರು . 17: ಕೋವಿಡ್‌ ಸಂಕಷ್ಟದಿಂದ ಭಾರೀ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಸಾರಿಗೆ ಇಲಾಖೆ ನಷ್ಟ ಸರಿದೂಗಿಸುವುದೇ ಚಿಂತೆಯಾಗಿದೆ. ಆರ್ಥಿಕ ಸಂಕಷ್ಟದಿಂದ ನಾಲ್ಕು ನಿಗಮಗಳ ನೌಕರರಿಗೆ ವೇತನ ಪಾವತಿ ಮಾಡಲು ಇಲಾಖೆ ಪರದಾಟ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಟಿಕೆಟ್ ದರ ಏರಿಕೆ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದ್ದರೂ ಇಂತಹ ಯಾವುದೇ ಚಿಂತನೆ ಸಾರಿಗೆ ಇಲಾಖೆಯ ಮುಂದಿಲ್ಲ ಎಂದು ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಸ್ಪಷ್ಟ ಪಡಿಸಿದ್ದಾರೆ.

 

 

 

ಕೋವಿಡ್‌ ಲಾಕ್‌ಡೌನ್‌ ಬಳಿಕ ಸರ್ಕಾರಿ ಬಸ್‌ಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಆದರೆ ಪ್ರಯಾಣಿಕರ ಸಂಖ್ಯೆ ತೀರಾ ವಿರಳವಾಗಿದೆ.ಪರಿಣಾಮ ಸಾರಿಗೆ ಇಲಾಖೆ ಭಾರೀ ನಷ್ಟವನ್ನು ಅನುಭವಿಸುತ್ತಿದೆ. ಕಳೆದ ಎರಡು ತಿಂಗಳಿಂದ ವೇತನ ಪಾವತಿಗೆ ಪರದಾಟ ನಡೆಸುವಂತಾಗಿದೆ. ಈ ಬಾರಿಯ ವೇತನವನ್ನು ಕೊಡಲೂ ಸಾರಿಗೆ ಇಲಾಖೆಯ ಬಳಿಕ ಹಣ ಇಲ್ಲದಾಗಿದೆ.ಸದ್ಯ ಟಿಕೆಟ್ ದರದಲ್ಲಿ ಏರಿಕೆ ಮಾಡುವ ಯಾವುದೇ ಚಿಂತನೆ ಸಾರಿಗೆ ಇಲಾಖೆಗೆ ಇಲ್ಲ. ಈ ಕುರಿತಾಗಿ ಸಿಎಂ ಬಿಎಸ್‌ ಯಡಿಯೂರಪ್ಪ ಜೊತೆಗೆ ನಡೆದ ಸಭೆಯಲ್ಲಿ ಚರ್ಚೆ ನಡೆದಿಲ್ಲ ಎಂದು ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದರು.

 

error: Content is protected !!

Join the Group

Join WhatsApp Group