ದೀಪಾವಳಿ ಪಟಾಕಿ ಅನಾಹುತ ➤ ಬೆಳಕಿನ ಹಬ್ಬದಲ್ಲಿ ಬೆಳಕನ್ನೆ ಕಳೆದು ಕೊಳ್ಳುವ ಭೀತಿ.!

(ನ್ಯೂಸ್ ಕಡಬ) newskadaba.com ಬೆಂಗಳೂರು . 15: ಹಸಿರು ಪಟಾಕಿ ಚರ್ಚೆಗಳ ನಡುವೆಯೇ ಬೆಂಗಳೂರಿನಲ್ಲಿ ಪಟಾಕಿ ಹಚ್ಚಿ 10ಕ್ಕೂ ಅಧಿಕ ಮಕ್ಕಳು ಕಣ್ಣು ಹಾಗೂ ಮುಖಕ್ಕೆ ಗಾಯ ಮಾಡಿಕೊಂಡು ತಮ್ಮ ಭವಿಷ್ಯಕ್ಕೆ ಕೊಡಲಿಯೇಟು ನೀಡಿದ್ದಾರೆ.

 

ಬೆಂಗಳೂರಿನಲ್ಲಿ ಪಟಾಕಿ ಹಚ್ಚಿ ಗಾಯಗೊಂಡ 10 ಮಕ್ಕಳ ಪೈಕಿ ನಾಲ್ವರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. 12 ವರ್ಷದ ಸುವೇಲ್ ಎಂಬ ಬಾಲಕ ಮಿಂಟೋ ಕಣ್ಣಾಸ್ಪತ್ರೆಗೆ ದಾಖಲಾಗಿದ್ದು, ಈತನ ಎರಡೂ ಕಣ್ಣುಗಳಿಗೂ ತೀವ್ರ ಹಾನಿಯಾಗಿದೆ. ಸುವೇಲ್ ನಿನ್ನೆ ರಾತ್ರಿ ಪಟಾಕಿ ಹೂವಿನ ಕುಂಡ ಹಚ್ಚುವಾಗ ಆತನ ಕಣ್ಣಿಗೆ ಬೆಂಕಿ ಹತ್ತಿಕೊಂಡಿದ್ದು, ಎರಡೂ ಕಣ್ಣುಗಳೂ ತೀವ್ರವಾಗಿ ಹಾನಿಗೊಂಡಿದ್ದು, ದೃಷ್ಟಿ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ.ಬೆಂಗಳೂರು ನಗರದಲ್ಲಿ ಸುಮಾರು 400ಕ್ಕೂ ಅಧಿಕ ಪಟಾಕಿ ಮಾರಾಟ ಮಳಿಗೆಗಳಿಗೆ ಪೊಲೀಸ್‌ ಇಲಾಖೆಯಿಂದ ಅನುಮತಿ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಬಹುತೇಕ ಕಡೆಯಲ್ಲೆಲ್ಲ ಹಸಿರು ಪಟಾಕಿ ಜತೆಗೆ ಮಾಮೂಲಿ ಪಟಾಕಿಗಳ ಮಾರಾಟ ಎಗ್ಗಿಲ್ಲದೆ ಸಾಗಿದೆ.

error: Content is protected !!

Join the Group

Join WhatsApp Group