ಉಡುಪಿಯಲ್ಲಿ ಬಿದಿರು ಪಟಾಕಿ ಸೌಂಡು ➤ ಇದು ನಮ್ಮ ಪೂರ್ವಜರ ಕೊಡುಗೆ.!

(ನ್ಯೂಸ್ ಕಡಬ) newskadaba.com ಉಡುಪಿ . 14:ಕೊರೊನಾ ಕರಾಳತೆಯಿಂದ ಹೊರಬಂದು ದೀಪಾವಳಿಗೆ ಪಟಾಕಿ ಸಿಡಿಸೋಣ ಅಂತ ಜನ ಹಾಕಿದ್ದ ಲೆಕ್ಕಾಚಾರ ಉಲ್ಟಾ ಆಗಿದೆ. ರಾಜ್ಯ ಸರ್ಕಾರ ರಾಸಾಯನಿಕ ಪಟಾಕಿ ನಿಷೇಧ ಮಾಡಿ, ದುಷ್ಪರಿಣಾಮ ರಹಿತ ಪಟಾಕಿಗೆ ಮಣೆ ಹಾಕಿದೆ. ಪಟಾಕಿಯ ಸಾಹಸವೇ ಬೇಡ ಅಂತಾ ಇಲ್ಲೊಂದು ತಂಡ ಬಿದಿರಿನ ಪಟಾಕಿ ರೆಡಿ ಮಾಡಿದ್ದಾರೆ

 

ಉಡುಪಿಯ ಪರ್ಕಳ ಫ್ರೆಂಡ್ಸ್ ಬಿದಿರು ಪಟಾಕಿ ತಯಾರಿಸಿದ್ದಾರೆ. ಏಳು ಗಂಟು ಇರುವ ಒಂದು ತುಂಡು ಬಿದಿರು. ಬುಡದ ಒಂದು ಗಂಟು ಬಿಟ್ಟು ಒಂದು ಬದಿಯಲ್ಲಿ ರಂಧ್ರ ಕೊರೆಯಬೇಕು. ಬಿದಿರು ಕೋಲಿನ ಎಲ್ಲಾ ಗಂಟುಗಳನ್ನು ಬಿಡಿಸಿದರೆ ಬಿದಿರು ಪಟಾಕಿ ಅರ್ಧ ರೆಡಿ. ಬಿದಿರನ್ನು ಅಡ್ಡ ಮಲಗಿಸಿ ರಂಧ್ರಕ್ಕೆ ಸ್ವಲ್ಪ ಸೀಮೆ ಎಣ್ಣೆ ಸುರಿದು, ಸೈಕಲ್ ಪಂಪ್ ನಲ್ಲಿ ಅದೇ ರಂಧ್ರಕ್ಕೆ ಗಾಳಿ ಹಾಕಿ, ಅದೇ ರಂಧ್ರದ ಮೇಲೆ ಬೆಂಕಿ ಸೋಕಿಸಿದರೆ ಸಾಕು  ಪಟಾಕಿಗಿಂತಲೂ ದೊಡ್ಡ  ಶಬ್ದ ಬರುತ್ತದೆ. ಹೊಗೆಯಿಲ್ಲ, ರಾಶಿ ಕಸ ಇಲ್ಲ. ನಯಾ ಪೈಸೆ ಖರ್ಚಿಲ್ಲ. ಮತ್ತೆ ಎರಡು ಚಮಚ ಸೀಮೆಯೆಣ್ಣೆ ತುಂಬಿಸಿ ಗಾಳಿ ಹಾಕಿ ಬೆಂಕಿಯಿಟ್ಟರೆ ದಡಂ ಎಂಬ ಸದ್ದು. ಇದು ದೇಸಿ ಪಟಾಕಿ.ಸರ್ಕಾರದ ಆದೇಶವನ್ನು ಉಳಿಸಿದಂತಾಯ್ತು ನಮ್ಮ ಹಳೆಯ ಸಂಪ್ರದಾಯವನ್ನು ಮತ್ತೆ ನೆನಪಿಸಿಕೊಂಡದ್ದು ಆಯಿತು. ನಾವು ಪರ್ಕಳದ ಗೆಳೆಯರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದೇವೆ ಎಂದು ಗಣೇಶ್ ಪರ್ಕಳ ತಿಳಿಸಿದ್ಧಾರೆ.

Also Read  ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮಂಗಳೂರಿನ ಅಂಕಿತಾ ರಾಜ್ಯಕ್ಕೆ ದ್ವಿತೀಯ

 

error: Content is protected !!
Scroll to Top