ಧರ್ಮಸ್ಥಳ: ಡಾ| ಡಿ. ವೀರೇಂದ್ರ ಹೆಗ್ಗಡೆಯವರಿಂದ ಜನತೆಗೆ ದೀಪಾವಳಿ ಸಂದೇಶ

(ನ್ಯೂಸ್ ಕಡಬ) newskadaba.com ಧರ್ಮಸ್ಥಳ.14: ಬೆಳಕಿನ ಹಬ್ಬ ದೀಪಾವಳಿ ಸುಜ್ಞಾನದ ಪ್ರತೀಕ. ದೀಪಾವಳಿ ಹಬ್ಬವನ್ನು ಎಲ್ಲರೂ ಶ್ರದ್ಧಾ-ಭಕ್ತಿಯಿಂದ ಸರಳವಾಗಿ ಆಚರಿಸೋಣ. ಸರ್ಕಾರದ ಮಾರ್ಗಸೂಚಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಸಂಪ್ರದಾಯ ಬದ್ಧವಾಗಿ ಸಂಸ್ಕøತಿ ರಕ್ಷಣೆಯೊಂದಿಗೆ ಪರಿಸರ ಸ್ನೇಹಿಯಾಗಿ ಹಬ್ಬ ಆಚರಿಸುವುದು ಎಲ್ಲರ ಕರ್ತವ್ಯವೂ, ಹೊಣೆಗಾರಿಕೆಯೂ ಆಗಿದೆ. ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಇಳಿಮುಖವಾಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರಿಂದ ಜನತೆಗೆ ದೀಪಾವಳಿ ಹಬ್ಬದ ಶುಭಾಶಯದ ಸಂದೇಶ ನೀಡಿದ್ದಾರೆ.

 

Xl

 

Also Read  ಮೊದಲ ಬಾರಿಗೆ ಅಮೇರಿಕಾದಲ್ಲಿ ಜಡ್ಜ್ ಆಗಿ ಭಾರತೀಯ ಮಹಿಳೆ ಆಯ್ಕೆ

ಆದಷ್ಟು ಬೇಗ ಕೊರೋನಾ ಸಂಪೂರ್ಣ ನಿರ್ಮೂಲನೆಯಾಗಿ ಎಲ್ಲರೂ ಭಾಗ್ಯವನ್ನು ಹೊಂದಿ ಭಯ ಮುಕ್ತ ವಾತಾವರಣದಲ್ಲಿ ಸುಖ- ಶಾಂತಿ, ನೆಮ್ಮದಿಯ ಜೀವನ ನಡೆಸುವಂತಾಗಲಿ ಎಂದು ಹಾರೈಸುತ್ತೇನೆ ಹಾಗೂ ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು ಎಂದು ದೀಪಾವಳಿ ಸಂದೇಶದ ಜತೆಗೆ ಶುಭಾಶಯ ತಿಳಿಸಿದ್ಧಾರೆ.

 

error: Content is protected !!
Scroll to Top