(ನ್ಯೂಸ್ ಕಡಬ) newskadaba.com ಕಡಬ, ಅ.3. ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದಲ್ಲಿ ನವರಾತ್ರಿ ಪೂಜೆ (ಹೊಸಅಕ್ಕಿ ನೈವೇದ್ಯ) ಕಾರ್ಯಕ್ರಮ ಆಯುಧ ಪೂಜೆ ನಡೆಯಿತು.
ದೇವಳದ ಪ್ರಧಾನ ಅರ್ಚಕ ಶ್ರೀಗೋಪಾಲಕೃಷ್ಣ ಕೆದಿಲಾಯ ಧಾರ್ಮಿಕ ವಿಧಿವಿಧಾನಗಳನ್ನು ನೇರವೇರಿಸಿದರು. ಸೆ 28ರಂದು ಮಧ್ಯಾಹ್ನ ಹೊಸಅಕ್ಕಿ ನೈವೇದ್ಯ, ಸಾರ್ವಜನಿಕ ಅನ್ನ ಸಂತರ್ಪಣೆ, ಸೆ 29ರಂದು ಬೆಳಗ್ಗೆ ಆಯುಧ ಪುಜೆಯು ನಡೆಯಿತು ಪ್ರತಿದಿನ ದೇವರಿಗೆ ನವರಾತ್ರಿ ವಿಶೇಷ ಪುಜೆ ಹಾಗೂ ಶ್ರೀದುರ್ಗಾಂಬಿಕಾ ಭಜನಾ ಮಂಡಳಿ ವತಿಯಿಂದ ಭಜನಾ ಸೇವೆ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜರ್ನಾಧನ ಗೌಡ ಪಣಿಮಜಲು, ಸದಸ್ಯರಾದ ಧರಣೇಂದ್ರ ಜೈನ್ ಬೆದ್ರಾಜೆ, ತಮ್ಮಯ್ಯ ನಾೖಕ್ ಕುಕ್ಕೆರೆಬೆಟ್ಟು, ಮೋನಪ್ಪ ಕುಂಬಾರ ಪಾಲೋಳಿ, ಚಂದ್ರಶೇಖರ ಕರ್ಕೆರ ಪೆಲತ್ತೋಡಿ, ಆನಂದ ಗೌಡ ಅಂಗಡಿಮನೆ, ಶಾಲಿನಿ ಸತೀಶ್ ನಾೖಕ್, ನೀಲಾವತಿ ಶಿವರಾಮ್, ಭಜನಾ ಸಮಿತಿ ಅಧ್ಯಕ್ಷ ಸೋಮಪ್ಪ ನಾೖಕ್, ಕಾರ್ಯದರ್ಶಿ ಮನೋಹರ ರೈ ಬೆದ್ರಾಜೆ ಸೇರಿದಂತೆ ಊರ ಪರವೂರ ಅಪಾರ ಭಕ್ತಾಧಿಗಳು ಭಾಗವಹಿಸಿದರು ——————————————————————————————————————