ನಾಳೆ (ಅ.05 ರಂದು) ಆಲಂಕಾರಿನಲ್ಲಿ ► ಎಸ್ಸಿ ಮೋರ್ಚಾದ “ಸಮರ್ಥನಾ ಸಮಾವೇಶ”

(ನ್ಯೂಸ್ ಕಡಬ) newskadaba.com ಕಡಬ,ಅ.3.  ಸುಳ್ಯ ಮಂಡಲ ಎಸ್ಸಿ ಮೋರ್ಚಾದ ವತಿಯಿಂದ ಅ.05 ರಂದು(ಗುರುವಾರ) ಆಲಂಕಾರಿನಲ್ಲಿ ನಡೆಯಲಿರುವ ಸಮರ್ಥನಾ ಸಮಾವೇಶದ ಹಿನ್ನೆಲೆಯಲ್ಲಿ ಸಮಲೋಚನ ಸಭೆಯು ಕಡಬ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಮರ್ದಾಳ ಅಂಬೇಡ್ಕರ್ ಭವನದಲ್ಲಿ ಭಾನುವಾರ ನಡೆಯಿತು.

ಬಿಜೆಪಿ ಜಿಲ್ಲಾ ಸಮಿತಿಯ ಸದಸ್ಯ ಕೃಷ್ಣ ಶೆಟ್ಟಿ ಕಡಬ ಮಾತನಾಡಿ, ಪ್ರದಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರದ ಯೋಜನೆಗಳ ಮಾಹಿತಿ ಹಾಗೂ ಈ ಹಿಂದೆ ರಾಜ್ಯವನ್ನಾಳಿದ ಬಿಜೆಪಿ ಸರಕಾರದ ಅವಧಿಯಲ್ಲಿನ ಜನಪರ ಯೋಜನೆಗಳನ್ನು ಜನರ ಮುಂದಿಡುವ ಮೂಲಕ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಭೇರಿ ಭಾರಿಸುವ ಮೂಲಕ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರಕಾರ ಚುಕ್ಕಾಣಿ ಹಿಡಿಯುವಂತೆ ಮಾಡುವುದು ನಮ್ಮೆಲ್ಲರ ಗುರಿಯಾಗಿರಲಿ. ಸಮರ್ಥನಾ ಸಮಾವೇಶದಲ್ಲಿ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಎಸ್ಸಿ ಮೋರ್ಚಾದ ಸದಸ್ಯರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸವಂತೆ ಕಾರ್ಯಕರ್ತರು ಮನವೊಲಿಸಬೇಕೆಂದರು.

Also Read  Home Windows Product Key not Working: the Best Way to Activate Windows Q0 / 11

ಬಿಜೆಪಿ ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿ ಕಿಶೋರ್ ಶಿರಾಡಿ, ಕಡಬ ಶಕ್ತಿ ಕೇಂದ್ರದ ಅಧ್ಯಕ್ಷ ವಾಡ್ಯಪ್ಪ ಗೌಡ, ಮಾತನಾಡಿದರು. ಸುಳ್ಯ ಮಂಡಲ ಉಪಾಧ್ಯಕ್ಷೆ ಪುಲಸ್ತ್ಯಾ ರೈ, ಕಡಬ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಪ್ರಕಾಸ್ ಎನ್ ಕೆ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಎ ಬಿ ಮನೋಹರ ರೈ, ಕಡಬ ಸಿ ಎ ಬ್ಯಾಂಕ್ ಅಧ್ಯಕ್ಷ ಸುಂದರ ಗೌಡ ಮಂಡೆಕರ, ಬಿಳಿನೆಲೆ ಸಿ ಎ ಬ್ಯಾಂಕ್ ಅಧ್ಯಕ್ಷ ಬಾಲಕೃಷ್ಣ ಗೌಡ ವಾಳ್ತಾಜೆ, ಮುಖಂಡರಾದ ಗಿರಿಶ್ ಎ ಪಿ, ಸತೀಶ್ ನಾಯಕ್, ಫಯಾಝ್ ಕೆನರಾ, ಶಿವಪ್ರಸಾದ್ ಮೈಲೇರಿ, ಉಮೇಶ್ ಶೆಟ್ಟಿ ಸಾಯಿರಾಂ, ಮಧುಸೂದನ್ ಕೊಂಬಾರು ಮೊದಲಾದವರು ಉಪಸ್ಥರಿದ್ದು ಸಲಹೆ ಸೂಚನೆ ನೀಡಿದರು.

error: Content is protected !!
Scroll to Top