ಕಡಬ : ನೂತನ ಸಂಸ್ಥೆ ಜೆ.ಎಸ್. ಸ್ಪೋರ್ಟ್ಸ್ & ಪ್ರಿಂಟ್ ಟೆಕ್ನಿಕ್ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ನ.09:  ಕ್ರೀಡೆ ಹಾಗೂ ಪ್ರಿಂಟಿಂಗ್ ಗೆ ಸಂಬಂಧಿಸಿದ ನೂತನ ಸಂಸ್ಥೆ ಜೆ.ಎಸ್. ಸ್ಪೋರ್ಟ್ಸ್ & ಪ್ರಿಂಟ್ ಟೆಕ್ನಿಕ್ ಇಂದು (ನ.09) ಕಡಬದ ಸೈಂಟ್ ಜೋಕಿಮ್ಸ್ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿತು.

 

 

ಮಾಥನ್ ಚಾಕೋ ಹಾಗೂ ಬೃಜಿತಾ ದಂಪತಿ ರಿಬ್ಬನ್ ಕಟ್ ಮೂಲಕ ನೂತನ ಸಂಸ್ಥೆಯನ್ನು ಉದ್ಘಾಟಿಸಿದರು. ಕೆರ್ಮಾಯಿ ಚರ್ಚ್‌ನ ಧರ್ಮಗುರು ಫಾ| ಪೀಟರ್ ಜಾನ್ ದೀಪ ಬೆಳಗಿಸಿ ಶುಭಹಾರೈಸಿದರು. ನೂತನ ಸಂಸ್ಥೆಯಲ್ಲಿ ಸ್ಮರಣಿಕೆ‌, ಗಿಫ್ಟ್ ಐಟಂ, ಮಗ್ ಪ್ರಿಂಟಿಂಗ್, ಟಿ-ಶರ್ಟ್ ಪ್ರಿಂಟಿಂಗ್, ಐಡಿ ಕಾರ್ಡ್ ಪ್ರಿಂಟಿಂಗ್, ಕ್ರೀಡೆಗೆ ಸಂಬಂಧಿಸಿದ ಎಲ್ಲಾ ಉಪಕರಣಗಳು, ರಬ್ಬರ್ ಸ್ಟ್ಯಾಂಪ್, ಪಿಲ್ಲೋ ಪ್ರಿಂಟ್ ಮೊದಲಾದ ಸೇವೆಗಳು ಒಂದೇ ಸೂರಿ‌ನಡಿ ಗ್ರಾಹಕರಿಗೆ ದೊರೆಯಲಿದೆ ಎಂದು ಸಂಸ್ಥೆಯ ಮಾಲಕರಾದ ಜಿಜೋ ಮ್ಯಾಥ್ಯೂ ಹಾಗೂ ಶ್ರದ್ಧಾ ಜಿಜೋ ತಿಳಿಸಿದ್ದಾರೆ.

 

error: Content is protected !!

Join the Group

Join WhatsApp Group