ಕೊಂಬಾರು: ಬಾವಿಗೆ ಬಿದ್ದು ಬಾಲಕ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಅ.03. ತಮ್ಮ ತೋಟದಲ್ಲಿನ ಕೆರೆಗೆ ಶಾಲಾ ಬಾಲಕನೋರ್ವ ಕಾಲು ಜಾರಿ ಮೃತಪಟ್ಟ ಘಟನೆ ಕೊಂಬಾರು ಎಂಬಲ್ಲಿ ಸೋಮವಾರ ರಾತ್ರಿ ನಡೆದಿದೆ.

ಇಲ್ಲಿನ ಕೊಂಬಾರು ಗ್ರಾಮದ ಕೊಡೆಂಕೀರಿ ನಿವಾಸಿ ನಾಗೇಶ್ ಎಂಬವರ ಪುತ್ರ ರಕ್ಷಿತ್(8) ಮೃತಪಟ್ಟ ದುರ್ದೈವಿ. ತಮ್ಮ ಮಗನನ್ನು ಮನೆಯಲ್ಲಿ ಬಿಟ್ಟು ತಂದೆ ತಾಯಿ ಪೇಟೆ ಕಡೆ ಹೋಗಿದ್ದು, ಮನೆಗೆ ಹಿಂತಿರುಗಿ ಬಂದಾಗ ರಕ್ಷಿತ್ ಮನೆಯಲ್ಲಿ ಇರಲಿಲ್ಲ ಎನ್ನಲಾಗಿದೆ. ಪಕ್ಕದಲ್ಲೆಲ್ಲಾ ಹುಡುಕಾಡಿದಾಗ ರಕ್ಷಿತ್ ನ ಮೃತದೇಹ ಕೆರೆಯಲ್ಲಿ ಕಂಡುಬಂದಿದೆ. ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿದ್ದು, ನಾಗೇಶ್ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Also Read  ಮಹಾರಾಷ್ಟ್ರ: ಕಮರಿಗೆ ಉರುಳಿ ಬಿದ್ದ ಬಸ್‌ ➤ ಐವರ ದುರ್ಮರಣ, 35ಕ್ಕೂ ಹೆಚ್ಚು ಮಂದಿಗೆ ಗಾಯ


ಮುಗೇರಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 2ನೇ ತರಗತಿ ವಿದ್ಯಾರ್ಥಿಯಾಗಿರುವ ರಕ್ಷಿತ್ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ತೋಟಕ್ಕೆ ಆಡಲೆಂದು ತೆರಳಿ ಕಾಲು ಜಾರಿ ಬಿದ್ದಿರಬಹುದೆಂದು ಶಂಕಿಸಲಾಗಿದೆ.

error: Content is protected !!
Scroll to Top