(ನ್ಯೂಸ್ ಕಡಬ) newskadaba.com ಕಡಬ,ಅ.3. ರೆಂಜಿಲಾಡಿ ಗ್ರಾಮದ ಎಳುವಾಲೆ ನಿವಾಸಿ ಬಾಬು ಗೌಡ ಅವರ ಅಡಿಕೆ ತೋಟಕ್ಕೆ ಕಾಡಾನೆ ಹಿಂಡು ಕಳೆದ ಮೂರು ದಿನಗಳಿಂದ ಲಗ್ಗೆ ಇಟ್ಟಿದ್ದು ಅಪಾರ ಪ್ರಮಾಣದ ಅಡಿಕೆ, ತೆಂಗು, ಬಾಳೆ ಕೃಷಿಯನ್ನು ನಾಶ ಮಾಡಿದೆ.
ಕಾಡಾನೆ ದಾಳಿಯಿಂದಾಗಿ ಸುಮಾರು 25000ರೂ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಅಲ್ಲದೆ ಈ ಪರಿಸರದ ಜರ್ನಾಧನ ಗೌಡ ಹಾಗೂ ರಾಮಚಂದ್ರ ಗೌಡ ಎಳುವಾಲೆ ಅವರ ಕೃಷಿ ತೋಟಕ್ಕೆ ಕೂಡ ದಾಳಿ ಮಾಡಿದ್ದು ಕೃಷಿಗೆ ಹಾನಿ ಮಾಡಿದೆ. ಈ ಬಗ್ಗೆ ಸೂಕ್ತ ಪರಿಹಾರ ಒದಗಿಸುವಂತೆ ಕಡಬ ತಹಶೀಲ್ದಾರರಿಗೆ, ಕೃಷಿ ಇಲಾಖೆ, ಹಾಗೂ ಗ್ರಾ.ಪಂಚಾಯತ್ ಮನವಿ ಮಾಡಲಾಗಿದೆ.