ಬಂಟ್ವಾಳ: ಯುವತಿಯನ್ನು ಕೊಲೆಗೈದು ನದಿತೀರದಲ್ಲಿ ಎಸೆದು ಹೋದ ದುಷ್ಕರ್ಮಿಗಳು

(ನ್ಯೂಸ್ ಕಡಬ) newskadaba.com ಬಂಟ್ವಾಳ, .8: ಯುವತಿಯೊಬ್ಬರನ್ನು ಕೊಲೆಗೈದು ತುಂಬೆ ತೀರದಲ್ಲಿ ಎಸೆದು ಹೋಗಿರುವ ಬಗ್ಗೆ ಶಂಕೆಯಾಗಿದೆ. ಮೃತ ವ್ಯಕ್ತಿಯನ್ನು ಮುಲ್ಕಿ ಒಡೆಯರ ಬೆಟ್ಟು ನಿವಾಸಿ ಆಶಾ(36) ಎಂದು ಗುರುತಿಸಲಾಗಿದೆ.

 

 

ಯುವತಿಯ ಶವ ನದಿ ತೀರದಲ್ಲಿ ಪತ್ತೆಯಾಗಿದ್ದು, ಮೈಮೇಲೆ ರಕ್ತದ ಕಲೆಗಳು ಕಂಡುಬಂದಿದೆ. ಹೀಗಾಗಿ ಯುವತಿಯನ್ನು ಕೊಲೆಗೈದು ಎಸೆದು ಹೋಗಿರಬಹುದು ಎಂದು ಹೇಳಲಾಗುತ್ತಿದೆ. ಮೃತಳು ಭೂ ವ್ಯವಹಾರ ನಡೆಸುತ್ತಿದ್ದು, ಈಕೆಯ ಸಾವು ಸಂಶಯಕ್ಕೆ ಕಾರಣವಾಗಿದೆ. ಇವರು ಒಡೆಯರಬೆಟ್ಟು ಮನೆಯಲ್ಲಿ ತಾಯಿಯೊಂದಿಗೆ ವಾಸಿಸುತ್ತಿದ್ದರು. ಮೃತ ದೇಹ ಪತ್ತೆಯಾದ ಬಳಿಕ ಆಕೆಯ ಮನೆಯವರು ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ.

Also Read  ಲಿವ್-ಇನ್ ಹತ್ಯೆ ➤ ಬೆಂಕಿ ಹಚ್ಚಿ ಕೊಲೆಗೈದ ಪ್ರಿಯಕರ!

 

 

error: Content is protected !!
Scroll to Top