ಉಡುಪಿ: ಬಸ್ ಮಾಲಕನ ಹತ್ಯೆ ಯತ್ನ ಪ್ರಕರಣ ➤ 9 ಮಂದಿ ಪೊಲೀಸರ ವಶಕ್ಕೆ

(ನ್ಯೂಸ್ ಕಡಬ) newskadaba.com ಉಡುಪಿ, . 07: ಎಕೆಎಂಎಸ್ ಬಸ್ ಮಾಲಕನ ಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಣಿಪಾಲ ಪೋಲಿಸರು ಒಂಬತ್ತು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

 

 

 

ಬಂಧಿತ ಆರೋಪಿಗಳನ್ನು ದರ್ಶನ್ ದೇವಯ್ಯ ವಿರಾಜಪೇಟೆ, ಸೌಭಾಗ್ಯ, ಅನಿಲ್ ಕುಮಾರ್, ಮಹೇಶ್ ಬಾಬು ಹಿರಿಯಪಟ್ಣ, ಸೋಮು ಕೆ.ಆರ್.ನಗರ, ಸುಕೇಶ್ ಪೂಜಾರಿ, ಮೋಹನ್ ಬೆಳ್ತಂಗಡಿ, ಗೋಪಾಲ್ ಮೂಡುಬಿದಿರೆ, ಸಂತೋಷ್ ಮುಡುಮನೆ ಎಂದು ಗುರುತಿಸಲಾಗಿದೆ. ೨ ದಿನಗಳ ಹಿಂದೆ ಎಕೆಎಂಎಸ್ ಬಸ್ ಮಾಲಿಕ ಸೈಫುದ್ದೀನ್ ಹತ್ಯೆಗೆ ಯತ್ನ ನಡೆದಿತ್ತು. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಕೇವಲ ಎರಡು ದಿನಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Also Read  ಗುಡಿಸಲಿಗೆ ಬೆಂಕಿ ➤ ಓರ್ವ ಸಜೀವ ದಹನ

 

 

error: Content is protected !!
Scroll to Top