ಉಡುಪಿಯಲ್ಲಿ ನಕಲಿ ದಂತ ವೈದ್ಯೆ ➤ ಆರೋಗ್ಯ ಇಲಾಖೆಯಿಂದ ಕ್ಲಿನಿಕ್ ಗೆ ಸೀಲ್

(ನ್ಯೂಸ್ ಕಡಬ) newskadaba.com ಉಡುಪಿ . 05: ಕ್ಲಿನಿಕ್ ನಡೆಸುವ ಬದಲು ನಕಲಿ ದಂತ ವೈದ್ಯರೊಬ್ಬರು ನಗರದಲ್ಲಿ ನಡೆಸುತ್ತಿದ್ದ ಡೆಂಟಲ್ ಕ್ಲಿನಿಕ್ ಲ್ಯಾಬ್ ಅನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಸೀಲ್ ಮಾಡಿದ ಪ್ರಕರಣ ನಗರದ ಠಾಣೆಯಲ್ಲಿ ದಾಖಲಾಗಿದೆ.

 

 

ಉಡುಪಿ ಸಿಟಿ ನಿಲ್ದಾಣದಲ್ಲಿ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿ ನಿಯಮ ಅಡಿಯಲ್ಲಿ ಶ್ವೇತಾ ಎಂಬುವವರಿಗೆ ಶಾಶ್ವತ್ ಡೆಂಟಲ್ ಕ್ಲಿನಿಕ್ ಲ್ಯಾಬ್ ಹೆಸರಿನ ವೈದ್ಯಕೀಯ ಸಂಸ್ಥೆಯನ್ನು ನಡೆಸಲು ಅನುಮತಿ ನೀಡಲಾಗಿತ್ತು. ಆದರೇ, ಇವರು ಕ್ಲಿನಿಕ್ ನಡೆಸುವ ಬದಲು ವೈದ್ಯಕೀಯ ಪದವಿ ಹೊಂದಿಲ್ಲದ ರಾಧಾ ಗೋವಿಂದ ಭಂಡಾರಿಯೆನ್ನುವವರಿಗೆ ಕ್ಲಿನಿಕ್ ನಿರ್ವಹಿಸಲು ಅವಕಾಶ ನೀಡಿದ್ದಾರೆ. ಈ ಬಗ್ಗೆ ಖಚಿತ ಮಾಹಿತಿ ತಿಳಿದ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಸಾರ್ವಜನಿಕರಿಗೆ ಮೋಸ ಮಾಡಿದ್ದಾರೆಂದು ಪೊಲೀಸರಿಗೆ ಉಡುಪಿ ಜಿಲ್ಲಾ ತಾಲೂಕು ಆರೋಗ್ಯ ಅಧಿಕಾರಿ ಡಾ.ನಾಗರತ್ನ ಅವರು ದೂರು ನೀಡಿದ್ದಾರೆ. ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Also Read  ಪೊಲೀಸರ ಮೇಲೆ ದ್ವಿಚಕ್ರ ವಾಹನ ಹತ್ತಿಸಲು ಯತ್ನಿಸಿದ ಅಪರಿಚಿತರು.! ➤ಪ್ರಕರಣ ದಾಖಲು

 

 

error: Content is protected !!
Scroll to Top