(ನ್ಯೂಸ್ ಕಡಬ) newskadaba.com ಉಡುಪಿ ನ. 04: ಹಾಡಹಗಲೇ ಮಣಿಪಾಲದಲ್ಲಿ ಬಸ್ ಮಾಲಕನ ಕಛೇರಿಗೆ ನಾಲ್ವರು ಅಪರಿತ ದುಷ್ಕರ್ಮಿಗಳ ತಂಡವೊಂದು ಮಾರಕಾಸ್ತ್ರದೊಂದಿಗೆ ಬಂದು ಬೆದರಿಸಿ ಹೋದ ಘಟನೆ ಇಂದು ಬೆಳಗ್ಗೆ ನಡೆದಿದೆ.
ಮಣಿಪಾಲ ಲಕ್ಷ್ಮಿಂದ್ರ ನಗರದಲ್ಲಿ ಕಾರ್ಯಾಚರಿಸುತ್ತಿರುವ ಎ .ಕೆ .ಎಮ್.ಎಸ್ ಬಸ್ ನ ಕಛೇರಿಗೆ ಡಸ್ಟರ್ ಕಾರಿನಲ್ಲಿ ಬಂದ ಕಿರಾತಕರು ತಲವಾರು ಹಿಡಿದು ಬಂದಿದ್ದಾರೆ. ಬಳಿಕ ಬಸ್ ಮಾಲಕನ ಕಛೇರಿಗೆ ನುಗ್ಗಿ ತಲವಾರು ತೋರಿಸಿ ಬೆದರಿಸಿ ಪರಾರಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇನ್ನು ಬಸ್ ಮಾಲಕ ಸೈಪುದ್ದೀನ್ ಮೇಲೆ ಈಗಾಗಲೇ ಹಲವಾರು ಕೇಸ್ ಗಳಿಗೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಮಣಿಪಾಲ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ಧಾರೆ.