(ನ್ಯೂಸ್ ಕಡಬ) newskadaba.com ನವದೆಹಲಿ, ಅ. 28. ನವೆಂಬರ್ 30 ರವರೆಗೆ ಕಡ್ಡಾಯವಾಗಿ ಶಾಲೆಗಳನ್ನು ತೆರೆಯುವಂತಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ನವೆಂಬರ್ ಅಂತ್ಯದವರೆಗೆ ಅನ್ ಲಾಕ್ 5.0 ವಿಸ್ತರಣೆ ಮಾಡಿದ್ದು, ಆದೇಶ ಹೊರಡಿಸಿದೆ.
ಗೃಹ ಸಚಿವಾಲಯಈ ಹಿಂದೆ ಸೆ. 30ರಂದು ಹೊರಡಿಸಲಾದ ಮಾರ್ಗಸೂಚಿ ಅ. 31ರವರೆಗೆ ಜಾರಿಯಲ್ಲಿತ್ತು. ಈ ಅವಧಿಯನ್ನು ನವೆಂಬರ್ 30 ರವರೆಗೆ ವಿಸ್ತರಿಸುವಂತೆ ಗೃಹ ಸಚಿವಾಲಯ ಇಂದು ಆದೇಶ ಹೊರಡಿಸಿದ್ದಾರೆ. ಆದೇಶದ ಪ್ರಕಾರ ದೇಶದಲ್ಲಿ ನವೆಂಬರ್ 30 ರವರೆಗೆ ಶಾಲೆಗಳನ್ನು ತೆರಯುವಂತಿಲ್ಲ ಎಂದು ಹೇಳಿದ್ದಾರೆ. ಮೆಟ್ರೊ ರೈಲು, ಮಾಲ್ ಗಳು, ಹೋಟೆಲ್ ಗಳು, ಧಾರ್ಮಿಕ ಸ್ಥಳಗಳು ಮುಂತಾದ ಬೃಹತ್ ಪ್ರಮಾಣದ ಸಭೆಗಳಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಪುನರಾರಂಭಿಸಲು ಕೆಲವು ನಿರ್ಬಂಧಗಳೊಂದಿಗೆ ಅನುಮತಿ ನೀಡಲಾಗಿದೆ.