ಸುಳ್ಯ: ತೊಡಿಕಾನ ದೇವರಗುಂಡಿಯಲ್ಲಿಅಶ್ಲೀಲ ಫೋಟೋಶೂಟ್ ➤ ಭಕ್ತರಿಂದ ಆಕ್ರೋಶ

(ನ್ಯೂಸ್ ಕಡಬ) newskadaba.com ಸುಳ್ಯ, ಅ. 28. ಇತ್ತೀಚಿನ ದಿನಗಳಲ್ಲಿ ತೊಡಿಕಾನ ಕ್ಷೇತ್ರಕ್ಕೆ ಸಂಬಂಧಿಸಿದ ದೇವರಗುಂಡಿಯಲ್ಲಿ ಕೆಲವರು ಅಶ್ಲೀಲವಾಗಿ ಫೋಟೋಗಳನ್ನು ತೆಗೆದಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ದೇವಾಲಯಕ್ಕೆ ಸಂಬಂಧಪಟ್ಟವರ ಜೊತೆ ಯಾವುದೇ ಅನುಮತಿ ಪಡೆಯದೇ ಅಶ್ಲೀಲ ಚಿತ್ರಗಳನ್ನು ಶೂಟಿಂಗ್ ಮಾಡಿದ್ದಾರೆ. ಇದೊಂದು ಧಾರ್ಮಿಕ ಕ್ಷೇತ್ರವಾಗಿರುವುದರಿಂದ ಈ ಬಗ್ಗೆ ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಭಕ್ತರು ಒತ್ತಾಯಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ವ್ಯವಸ್ಥಾಪನಾ ಮಂಡಳಿಯ ಮಾಜಿ ಅಧ್ಯಕ್ಷರು ” ದೇವಸ್ಥಾನಕ್ಕೆ ಸಂಬಂಧಪಟ್ಟ ಜಾಗವಾದರೂ ಅದು ಅರಣ್ಯ ವ್ಯಾಪ್ತಿಯಲ್ಲಿದ್ದು, ನಾವು ಅಲ್ಲಿ ಯಾವುದೇ ಸೆಕ್ಯೂರಿಟಿ ಇಡಲು ಸಾಧ್ಯವಿಲ್ಲ, ಆದರೇ ಇಂತಹ ಘಟನೆಗಳು ಇನ್ಮುಂದೆ ಮರುಕಳಿಸಬಾರದು, ಇಂತಹ ಘಟನೆಗಳಿಂದ ಶ್ರೀ ಕ್ಷೇತ್ರಕ್ಕೆ ಧಕ್ಕೆಯಾಗಬಾರದು ಎಂದಿದ್ದಾರೆ.

Also Read  ಕಡಬದಲ್ಲಿ ಕೊರೋನಾ ಅಟ್ಟಹಾಸ ➤ ಇಂದು ಮತ್ತೆ ಐವರಲ್ಲಿ ಸೋಂಕು ದೃಢ

error: Content is protected !!
Scroll to Top