ಪುಟಾಣಿ ಪೋರನ ಕಲಾಕೃತಿಯಲ್ಲಿ ಮೂಡಿತು ‘ಬೆಂಕಿ ಕಡ್ಡಿಯ ರಾವಣ’…! ➤ ಪ್ರತಿಕೃತಿ ದಹನದ ವಿಡಿಯೋ ವೈರಲ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ. 26. ದಸರಾ ಸಂಭ್ರಮ ಆಚರಣೆಯ ಕೊನೆಯಲ್ಲಿ ರಾವಣನ ಪ್ರತಿಕೃತಿ ದಹನದ ಅನೇಕ ಕಾರ್ಯಕ್ರಮಗಳನ್ನು ನಾವೆಲ್ಲಾ ನೋಡಿದ್ದೇವೆ. ಇಲ್ಲೋರ್ವ 6 ವಯಸ್ಸಿನ ಪುಟಾಣಿ ಪೋರ ಬೆಂಕಿಕಡ್ಡಿಗಳನ್ನು ಬಳಸಿಕೊಂಡು ರಾವಣನ ಮಿನಿ ಪ್ರತಿಕೃತಿ ನಿರ್ಮಿಸಿದ್ದಾನೆ.

ಅಸ್ಸಾಂನ ಮಿಂಟಿ ರಾಣಿ ದಾಸ್ ಎಂಬವರ ಪುತ್ರ ಈ ಕಲಾಕೃತಿಯನ್ನು ರಚಿಸಿ ಎಲ್ಲರ ಮನಗೆದ್ದಿದ್ದಾನೆ. “ರಾವಣನ ಪ್ರತಿಕೃತಿ ಮಾಡಿಕೊಡಲು ನನ್ನ ಮಗ ನನಗೆ ಕೇಳಿದ್ದ. ನಾನು ಸಂಪನ್ಮೂಗಳು ಹೆಚ್ಚಾಗಿ ಇಲ್ಲದ ಕಾರಣ ಈ ಬಾರಿ ರಾವಣನ ದೊಡ್ಡ ಪ್ರತಿಕೃತಿಯನ್ನು ಮಾಡಲು ಸಾಧ್ಯವಿಲ್ಲ ಎಂದು ಆತನಿಗೆ ತಿಳಿಸಿದ್ದೆ” ಎಂದಿದ್ದಾರೆ. ಇದಾದ ಕೆಲವು ಸಮಯದ ನಂತರ ಆಕೆಯ ಮುದ್ದಿನ ಮಗ ಬೆಂಕಿಕಡ್ಡಿಗಳನ್ನು ಬಳಸಿ ಮಾಡಿದ ರಾವಣನ ಈ ಪ್ರತಿಕೃತಿಯ ವಿಡಿಯೋವನ್ನು ಆತನ ತಾಯಿಯು ಟ್ವಿಟರ್‌ನಲ್ಲಿ ಶೇರ್‌ ಮಾಡಿದ್ದಾರೆ. ಈ ವಿಡಿಯೊ ಈಗ ಸಾಮಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Also Read  ಮಾಸ್ಕ್, ಸಾಮಾಜಿಕ ಅಂತರದಿಂದ ಮಾತ್ರ ಕೊರೋನಾ ನಿಯಂತ್ರಣ ಸಾಧ್ಯ ➤ ಕರ್ನಾಟಕದಲ್ಲಿ ಇನ್ಮುಂದೆ ಲಾಕ್ ಡೌನ್ ಇಲ್ಲ - ಸಿ.ಎಂ

 

 

error: Content is protected !!
Scroll to Top