ಕಾಸರಗೋಡು ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ ➤ ಜಿಲ್ಲಾಧಿಕಾರಿ ಡಾ. ಸಜಿತ್‌ ಬಾಬು ಆದೇಶ

(ನ್ಯೂಸ್ ಕಡಬ) newskadaba.com ಕಾಸರಗೋಡು, ಅ.23: ಕೊರೋನಾ ಸೋಂಕು ಹರಡುತ್ತಿರುವ ಹಿನ್ನಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಜಾರಿಗೆ ತರಲಾಗಿದ್ದ ನಿಷೇಧಾಜ್ಞೆಯನ್ನು ಅ. 31 ರ ತನಕ ವಿಸ್ತರಿಸಿ ಜಿಲ್ಲಾಧಿಕಾರಿ ಡಾ. ಸಜಿತ್‌ ಬಾಬು ಆದೇಶ ಹೊರಡಿಸಿದ್ದಾರೆ.

 

 

ಸೋಂಕು ನಿಯಂತ್ರಣದ ದೃಷ್ಟಿಯಿಂದ ಅ. 3 ರಿಂದ ಸೆಕ್ಷನ್‌ 144 ರಂತೆ ನಿಷೇಧಾಜ್ಞೆಯನ್ನು ಕೇರಳದಲ್ಲಿ ಜಾರಿಗೆ ತರಲಾಗಿತ್ತು. ಆದರೆ ಕಾಸರಗೋಡು ಜಿಲ್ಲೆಯಲ್ಲಿ ಹಂತಹಂತವಾಗಿ ನಿಷೇಧಾಜ್ಞೆ ತರಲಾಯಿತ್ತು. ಮಂಜೇಶ್ವರ, ಬದಿಯಡ್ಕ, ಕುಂಬಳೆ, ವಿದ್ಯಾನಗರ ಕಾಸರಗೋಡು, ಮೇಲ್ಪರಂಬ, ಬೇಕಲ, ಹೊಸದುರ್ಗ, ನೀಲೇಶ್ವರ, ಚಂದೇರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪರಪ್ಪ, ಒಡೆಯಂಚಾಲ್‌, ಪನತ್ತಡಿ ಪೇಟೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ವಿಸ್ತರಿಸಿದೆ. ಈ ಪ್ರದೇಶದಲ್ಲಿ 5 ಕಿಂತ ಅಧಿಕ ಮಂದಿ ಗುಂಪುಗೂಡುವುದನ್ನು ನಿಷೇಧಿಸಲಾಗಿದೆ.ವಿವಾಹಕ್ಕೆ 50 ಮಂದಿ, ಮರಣಾಂತರದ ಕಾರ್ಯಕ್ರಮಗಳಿಗೆ 20 ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ.

Also Read  ಕಡಬ: ಬೈಕಿಗೆ ಢಿಕ್ಕಿ ಹೊಡೆದು ಪರಾರಿಯಾದ ಮಿನಿಬಸ್ ➤ ಪಂಚಾಯತ್ ಸದಸ್ಯೆ ಗಂಭೀರ

error: Content is protected !!
Scroll to Top