ಕಡಬ: ಚಾಲಕರಿಗೆ ಮತ್ತು ವರ್ತಕರಿಗೆ ಕೋವಿಡ್ ಪರೀಕ್ಷೆ ಕಡ್ಡಾಯ

(ನ್ಯೂಸ್ ಕಡಬ) newskadaba.com ಕಡಬ, ಅ.22: ತಾಲೂಕು ಕೇಂದ್ರವಾದ ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಕಡಬ ತಹಸೀಲ್ದಾರ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿಗದಿಯಾಗಿರುವಂತೆ ವಾಹನ ಚಾಲಕರು, ವರ್ತಕರು ಹಾಗೂ ಸಿಬ್ಬಂದಿಗಳು, ಖಾಸಗಿ ಕಛೇರಿಗಳ ಸಿಬ್ಬಂದಿಗಳು ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ವರದಿಯ ದೃಢಪತ್ರವನ್ನು ತಮ್ಮ ಅಂಗಡಿ ಮತ್ತು ವಾಹನದಲ್ಲಿ ಇಟ್ಟುಕೊಳ್ಳುವಂತೆ ಕಡಬ ಪೋಲಿಸ್, ಕಡಬ ಪಟ್ಟಣ ಪಂಚಾಯತ್ ಜಂಟಿ ಪ್ರಕಟಣೆಯಲ್ಲಿ ತಿಳಿಸೀದೆ.

 

ಈ ಬಗ್ಗೆ ಈಗಾಗಲೇ ವಾಹನ ಚಾಲಕರ ಸಂಘ ಮತ್ತು ವರ್ತಕ ಸಂಘದ ಪದಾಧಿಕಾರಿಗಳಿಗೆ ನೋಟಿಸು ನೀಡಲಾಗಿದೆ. ಕಡಬ ಭಾಗದಲ್ಲಿ ಕೋವಿಡ್ ಉಚಿತ ಪರೀಕ್ಷಾ ಶಿಬಿರಗಳನ್ನು ನಡೆಸಿದಾಗ ಹೆಚ್ಚಿನ ಎಲ್ಲ ವಾಹನ ಚಾಲಕರು, ವರ್ತಕರು, ಸಿಬ್ಬಂದಿಗಳು ಕೋವಿಡ್ ಪರೀಕ್ಷೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಕಡಬ ಪಟ್ಟಣ ಪಂಚಾಯತ್ ಆಡಳಿತಾಧಿಕಾರಿಗಳು ಮತ್ತು ಕಡಬ ಪೋಲಿಸರು ಕ್ರಮ ಕೈಗೊಂಡಿದ್ದು ಎಲ್ಲಾ ವಾಹನ ಚಾಲಕರು ಹಾಗೂ ವರ್ತಕರು ಕೋವಿಡ್ ತಪಾಸಣೆ ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕೆಂದು ವಿನಂತಿಸಿದ್ದಾರೆ. ಮುಂದೆ ವಾಹನ ತಪಾಸಣೆ ಮಾಡುವಾಗ ಕೋವಿಡ್ ದೃಢಪತ್ರ ಇರುವ ಬಗ್ಗೆ ಖಾತ್ರಿಪಡಿಸಿಕೊಳ್ಳಲಾಗುವುದು ಮತ್ತು ಅಂಗಡಿ ಮಾಲಕರು ತಮ್ಮ ಅಂಗಡಿಯಲ್ಲಿ ದೃಢಪತ್ರವನ್ನು ಇಟ್ಟುಕೊಳ್ಳುವುದು ಕೂಡ ಕಡ್ಡಾಯವಾಗಿರುತ್ತದೆ.

ಉಚಿತ ಕೋವಿಡ್ ತಪಾಸಣೆ ಶಿಬಿರ ನಡೆಯುವ ದಿನ, ಮತ್ತು ಸ್ಥಳ:
ಅ. 23 ಶುಕ್ರವಾರ ಅಂಬೇಡ್ಕರ್ ಭವನದಲ್ಲಿ ಕಡಬದ ಎಲ್ಲಾ ವಾಹನ ಚಾಲಕರಿಗೆ ಶಿಬಿರ ಏರ್ಪಡಿಸಲಾಗಿದೆ.
ಅ. 27 ರಂದು ಕಡಬ ಅಂಬೇಡ್ಕರ್ ಭವನದಲ್ಲಿ ಮತ್ತು ಅ.28 ರಂದು ಕಡಬ ಸೈಂಟ್ ಜೋಕಿಮ್ಸ್ ಶಾಲೆಯ ಬಳಿಯ ಜೈ ರಾಂ ಟವರ್ಸ್ ನಲ್ಲಿ ವರ್ತಕರು ಹಾಗೂ ಸಿಬ್ಬಂದಿಯವರಿಗೆ ಶಿಬಿರ ಏರ್ಪಡಿಸಲಾಗಿದೆ.

 

error: Content is protected !!

Join the Group

Join WhatsApp Group