ಏಳು ಬೆಟ್ಟಗಳ ಒಡೆಯನಿಗೆ 28 ಕೆ.ಜಿ. ತೂಕದ ಚಿನ್ನದ ನೆಕ್ಲೇಸ್ ಉಡುಗೋರೆ …!!! ► ಈ ಹಾರದ ವಿಶೇಷತೆ ಏನು ಗೊತ್ತಾ..???

(ನ್ಯೂಸ್ ಕಡಬ) newskadaba.com  ತಿರುಪತಿ,ಸೆ.25. ಏಳು ಬೆಟ್ಟಗಳ ಒಡೆಯನೆಂದೇ ಪ್ರಸಿದ್ಧಿ ಪಡೆದ ತಿರುಪತಿ ತಿಮ್ಮಪ್ಪನಿಗೆ ಆಂಧ್ರಪ್ರದೇಶದ ವಿಜಯವಾಡದ ಉದ್ಯಮಿ ಭಕ್ತರೊಬ್ಬರು ಸುಮಾರು 8.36 ಕೋಟಿ ರೂ. ಮೌಲ್ಯದ ಚಿನ್ನದ ಹಾರವನ್ನು ಉಡುಗೊರೆಯಾಗಿ ಅರ್ಪಿಸಿದ್ದಾರೆ.

ಒಂಬತ್ತು ದಿನಗಳ ವಾರ್ಷಿಕ ಬ್ರಹ್ಮೋತ್ಸವ ಹಬ್ಬದ ಮೊದಲ ದಿನ, ಸುಮಾರು 28 ಕೆ.ಜಿ. ತೂಕ ತೂಗುವ ಈ ಹಾರದಲ್ಲಿ, ವೆಂಕಟೇಶ್ವರ ದೇವರ 1008 ಪವಿತ್ರ ಹೆಸರುಗಳ ಹಾಗೂ 1008 ಚಿನ್ನದ ನಾಣ್ಯಗಳನ್ನು ಒಳಗೊಂಡಿರುವುದು ವಿಶೇಷ.

ಬೃಹತ್ ಚಿನ್ನದ ಹಾರವನ್ನು ಆಂಧ್ರಪ್ರದೇಶ ಮೂಲದ ವಿಜಯವಾಡ ಉದ್ಯಮಿಯಾದ ಎಂ. ರಾಮಲಿಂಗ ರಾಜು ಅವರು ತಿರುಪತಿ ತಿಮ್ಮಪ್ಪ ದೇವರಿಗೆ ಭಕ್ತಿಯಿಂದ ಒಪ್ಪಿಸಿದ್ದಾರೆ.

Also Read  ಚಂದ್ರಯಾನ-3 ಕೊನೆಯ ಹಂತದ ಡೀಬೂಸ್ಟಿಂಗ್ ಯಶಸ್ವಿ - ಆ. 23ರಂದು ಲ್ಯಾಂಡಿಂಗ್

ಸಿಎಂ ಎನ್. ಚಂದ್ರಬಾಬು ನಾಯ್ಡು, ಹಿರಿಯ ಅರ್ಚಕರು ಮತ್ತು ದೇವಳದ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ರಾಮಲಿಂಗ ರಾಜುರವರು ಈ ಹಾರವನ್ನು ಸಮರ್ಪಿಸಿದರು. ವಾರ್ಷಿಕ ಬ್ರಹ್ಮೋತ್ಸವದ ಪ್ರಯುಕ್ತ ರೇಷ್ಮೆ ವಸ್ತ್ರವನ್ನು ಅರ್ಪಿಸುವ ಸಾಂಪ್ರದಾಯಿಕ ಆಚರಣೆಯ ಹಿನ್ನೆಲೆಯಲ್ಲಿ ಸಿಎಂ ಎನ್. ಚಂದ್ರಬಾಬು ನಾಯ್ಡು ದೇವಸ್ಥಾನಕ್ಕೆ ಈ ವೇಳೆ ಆಗಮಿಸಿದ್ದರು.

error: Content is protected !!
Scroll to Top