ಪಂಜ: ಎಡಬಿಡದೆ ಭಾರಿ ಮಳೆಗೆ ರಾಜ್ಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ

(ನ್ಯೂಸ್ ಕಡಬ) newskadaba.com ಪಂಜ, ಅ.11: ರಾಜ್ಯ ಹೆದ್ದಾರಿಯ ಪಂಜ ಸಮೀಪದ ಕರಿಕ್ಕಳ ಕಾಡು ಪ್ರದೇಶದಲ್ಲಿ ಕಳೆದ ದಿನ ಸಂಜೆ ಎಡಬಿಡದೆ ಗುಡುಗು ಮಿಂಚು ಸಹಿತ ಭಾರಿ ಮಳೆಗೆ ಅಲ್ಲಲ್ಲಿ ಹಾನಿಯಾದ್ದು, ಅನೇಕ ಕಡೆ ಗುಡ್ಡ ಕುಸಿದದೆ.

 

 

ಈ ಪ್ರದೇಶದ ರಸ್ತೆ ಬದಿಯಲ್ಲಿ ಹೊಸದಾಗಿ ನಿರ್ಮಿಸಲಾಗಿದ್ದ ವಿದ್ಯುತ್‌ ಲೈನ್‌ ಗೆ ಅಪಾರ ಹಾನಿಯುಂಟಾಗಿದೆ. ಕುಸಿತಗೊಂಡ ಗುಡ್ಡದಲ್ಲಿ ಅನೇಕ ಮರಗಳು ಸಿಲುಕಿದ್ದು ರಸ್ತೆ ಸಂಚಾರಕ್ಕೆ ಅಪಾಯ ಉಂಟುಮಾಡಿದೆ.ಗುಡ್ಡ ಕುಸಿತದಿಂದ ಮರಗಳು ಧರೆಗೆ ಉರುಳಿ ವಿದ್ಯುತ್‌ ಕಂಬ, ತಂತಿಗೆ ಹಾನಿಯಾಗಿದೆ. ಇಂದು ನೂತನ ವಿದ್ಯುತ್‌ ಲೈನ್‌ ಗುತ್ತಿಗೆದಾರರು ಸ್ಥಳಕ್ಕೆ ಆಗಮಿಸಿ ರಸ್ತೆಯಲ್ಲಿದ್ದ ವಿದ್ಯುತ್‌ ತಂತಿ, ಕಂಬ,ಮತ್ತು ಮರಗಳನ್ನು ತೆರವುಗೊಳಿಸಿದರು.

Also Read  ನೆಲ್ಯಾಡಿ: ಕಂದಕಕ್ಕೆ ಉರುಳಿದ ಸಿಮೆಂಟ್ ಸಾಗಾಟದ ಲಾರಿ ➤ ಚಾಲಕನಿಗೆ ಗಾಯ

 

error: Content is protected !!
Scroll to Top