ಮೈಸೂರು: ಸಿನಿಮಾದಲ್ಲಿ ಚಾನ್ಸ್​ ಕೊಡಿಸ್ತೀನಿ ಎಂದು ಮಹಿಳೆಯರಿಗೆ ವಂಚಿಸಿ ಪರಾರಿ

(ನ್ಯೂಸ್ ಕಡಬ) newskadaba.com ಮೈಸೂರು, ಅ.10: ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲಸ ಮಾಡುವವರು ಸಿಕ್ಕರೆ ಪೂರ್ವಾಪರ ತಿಳಿಯೋಕು ಮುನ್ನವೇ ಅವರನ್ನು ಸುಲಭವಾಗಿ ನಂಬಿಬಿಡ್ತಾರೆ. ಸಲುಗೆ ಬೆಳೆಸಿಕೊಳ್ಳವು ಜತೆಗೆ ಹಣವನ್ನೂ ಸುರಿದುಬಿಡ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡ ವಂಚಕನೊಬ್ಬ ಬರೋಬ್ಬರಿ 50ಕ್ಕೂ ಹೆಚ್ಚು ಮಹಿಳೆಯರಿಗೆ ಪಂಗನಾಮ ಹಾಕಿದ್ದಾನೆ.

 

 

ಚಾಮರಾಜ ಜೋಡಿ ರಸ್ತೆಯ ಖಿಲ್ಲೆ ಮೊಹಲ್ಲಾದ ನಿವಾಸಿ ಗಿರೀಶ್​ ಎಂಬಾತ ನಗರದ ವಿವಿಧೆಡೆ ನಟನೆ ಏಜೆನ್ಸಿ ಕಚೇರಿಗಳನ್ನು ತೆರೆದು, ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ಅಭಿನಯದಲ್ಲಿ ಆಸಕ್ತಿ ಇರುವವರ ಮಾಹಿತಿ ಸಂಗ್ರಹಿಸುತ್ತಿದ್ದ. ಧಾರಾವಾಹಿಗಳಲ್ಲಿ ಅವಕಾಶ ಸಿಕ್ಕೇ ಬಿಟ್ಟಿತು ಎಂದು ನಂಬಿಸಿ ಕೆಲವರ ಬಳಿ 50 ಸಾವಿರದಿಂದ 1 ಲಕ್ಷ ರೂ.ವರೆಗೂ ಹಣ ತಗೊಳ್ಳುತ್ತಿದ್ದ. ಕೆಲ ಯುವತಿಯರೊಂದಿಗೆ ಅಸಭ್ಯವಾಗಿಯೂ ನಡೆದುಕೊಂಡಿದ್ದ, ಪರದೆ ಮೇಲೆ ಕಾಣಿಸಿಕೊಳ್ಳುವ ಕನಸಿನೊಂದಿಗೆ ಎಲ್ಲವನ್ನೂ ಸಹಿಸಿಕೊಂಡು ಕಾಯುತ್ತಿದ್ದ ಮಹಿಳೆಯರಿಗೆ ಇದೀಗ ಗಿರೀಶ್ ಬಿಗ್​ ಶಾಕ್​ ಕೊಟ್ಟಿದ್ದಾನೆ.​ ರಾತ್ರೋರಾತ್ರಿ ತನ್ನ ಕಚೇರಿ ಬಂದ್​ ಮಾಡಿ ಪರಾರಿಯಾಗಿದ್ದಾನೆ. ಈ ಸುದ್ದಿ ತಿಳಿಯುತ್ತಿದ್ದಂತೆ ಮೋಸಹೋದ ಮಹಿಳೆಯರು ಚಾಮರಾಜ ಜೋಡಿ ರಸ್ತೆಯ ಕಚೇರಿ ಎದುರು ಇತ್ತೀಚಿಗೆ ಪ್ರತಿಭಟನೆ ನಡೆಸಿದ್ದರು. ವಂಚನೆಗೆ ಒಳಗಾದ ಸಂತೋಷ್​ಕುಮಾರ್​ ಸಿಂಗ್​, ಜಲಜಾಕ್ಷಿ, ಸುಕನ್ಯಾ, ಗೋಪಿ, ವೈಭವ್​, ನಾಗರತ್ನಾ, ಅಂಜಲಿ, ರಾಮು ಮತ್ತಿತರರು ವಂಚಕ ಗಿರೀಶ್​ ಬಂಧನಕ್ಕೆ ಆಗ್ರಹಿಸಿದ್ದಾರೆ. ಇದೀಗ ನಜರ್​ಬಾದ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Also Read  ಗೃಹಬಳಕೆಯ ಎಲ್ ಪಿಜಿ ದರದಲ್ಲಿ ಭಾರೀ ಏರಿಕೆ ➤ ಇಂದಿನಿಂದಲೇ ನೂತನ ದರ ಜಾರಿ

 

 

error: Content is protected !!
Scroll to Top