ಬೆಂಗಳೂರು: ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ ನಿರೂಪಕಿ ಅನುಶ್ರೀ

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ.08: ಈಗಾಗಲೇ ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕಣದಲ್ಲಿ ಸಿಸಿಬಿ ವಿಚಾರಣೆ ಎದುರಿಸಿ ಬಂದಿದ್ದಂತ ನಿರೂಪಕಿ ಅನುಶ್ರೀಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಆಸ್ಕಾ ನಿರೂಪಕಿ ಅನುಶ್ರೀ ಬಗ್ಗೆ ಇದೀಗ ಸ್ಪೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.

 

 

ನಿರೂಪಕಿ ಅನುಶ್ರೀ ಕುರಿತಂತೆ ಡ್ರಗ್ಸ್ ಪ್ರಕಣದಲ್ಲಿ ಸಿಸಿಬಿಯಿಂದ ಬಂಧನಕ್ಕೆ ಒಳಗಾಗಿರುವಂತ ಆಸ್ಕಾ ಸ್ಪೋಟಕ ಹೇಳಿಕೆಯೊಂದನ್ನು ನೀಡಿದ್ದು, ಇದರಿಂದಾಗಿಯೇ ಇದೀಗ ಆಯಂಕರ್ ಅನುಶ್ರೀಗೆ ಮತ್ತೊಂದು ಸಂಕಷ್ಟ ಎದುರಾದಂತಾಗಿದೆ. ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗುವ ಮೂಲಕ, ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆಯ ಕರಾಳ ಮುಖ ಬಯಲಾಗಿದ್ದೇ, ಸಿಸಿಬಿಯಿಂದ ಆಸ್ಕಾ ಬಂಧನದ ನಂತ್ರವಾಗಿತ್ತು.  ಅದೇ, ಆಯಂಕರ್ ನಿರೂಪಕಿ ಅನುಶ್ರೀ  ಅಪಾರ್ಟ್ಮೆಂಟ್ ಗೆ ಬರುತ್ತಿದ್ದು,  ಅವರು, ನನ್ನ ಗ್ಲೋಬಲ್ ಅಪಾರ್ಟ್ಮೆಂಟ್ ನ ಫ್ಲಾಟ್ ನಂ.103ಗೆ ಪದೇ ಪದೇ ಬರ್ತಾ ಇರುತ್ತಿದ್ದರು.  ಅನುಶ್ರೀಗೂ ತಮಗೂ ಪರಿಚಯ ವಿದೆ ಎಂಬ ಸ್ಪೋಟಕ ಮಾಹಿತಿಯನ್ನು ಸಿಸಿಬಿ ಮುಂದೆ ಬಾಯ್ಬಿಟ್ಟಿದ್ದಾರೆ. ಇದರಿಂದಾಗಿ ನಿರೂಪಕಿ ಅನುಶ್ರೀ ಅವರಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾದಂತಾಗಿದೆ.

Also Read  ಮಂಗಳೂರು: ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಅವಕಾಶ ➤ ಜಿಲ್ಲಾಧಿಕಾರಿ

 

error: Content is protected !!
Scroll to Top