ಪುತ್ತೂರು: ಎರಡನೇ ದಿನವೂ ರಿಕ್ಕಿ ರೈಯವರ ಡ್ರಗ್ಸ್ ಕೇಸು ವಿಚಾರಣೆ

(ನ್ಯೂಸ್ ಕಡಬ) newskadaba.com ಪುತ್ತೂರು, ಅ.07: ಡ್ರಗ್ಸ್‌ ದಂಧೆಗೆ ಸಂಬಂಧಪಟ್ಟಂತೆ ಜಯ ಕರ್ನಾಟಕ ಸಂಸ್ಥಾಪಕ ಅಧ್ಯಕ್ಷ, ಮಾಜಿ ಭೂಗತ ಡಾನ್‌ ಎನ್. ಮುತ್ತಪ್ಪ ರೈಯವರ ಎಡನೇ ಪುತ್ರ ರಿಕ್ಕಿ ರೈಯವರ ವಿಚಾರಣೆ ಇದೀಗ ಎರಡನೇ ದಿನವೂ ಮುಂದುವರಿದಿದೆ. ಸಿಸಿಬಿ ಇನ್ಸ್ಪೆಕ್ಟರ್‌ ಪುನೀತ್‌ ನೇತೃತ್ವದ ತಂಡದಿಂದ ರಿಕ್ಕಿ ರೈ ವಿಚಾರಣೆ ನಡೆಯುತ್ತಿದೆ.

 

 

ಕಳೆದ ದಿನ ಬೆಂಗಳೂರಿನ ಸದಾಶಿವ ನಗರದಲ್ಲಿರುವ ರಿಕ್ಕಿ ರೈಯವರ ಫ್ಲ್ಯಾಟ್‌ ಮತ್ತು ಬಿಡದಿ ನಿವಾಸಕ್ಕೆ ದಾಲಿ ನಡೆಸಿ ರಿಕ್ಕಿ ರೈಯವರನ್ನು ವಿಚಾರಣೆಗೆ ಒಳಪಡಿಸಿದ್ದ ಸಿಸಿಬಿಯ ಎಸಿಪಿ ಹನುಮಂತರಾಯ ಮತ್ತು ಇನ್ಸ್ಪೆಕ್ಟರ್‌ ಮಹಾನಂದರವರು ಮಹತ್ವದ ಮಾಹಿತಿಗೆ ಕಲೆ ಹಾಕಿದ್ದರು. ಇಂದು ಮತ್ತೆ ಸಿಸಿಬಿ ಅಧಿಕಾರಿಗಳು ಸಿಸಿಬಿ ಕಛೇರಿಯಲ್ಲಿ ರಿಕ್ಕಿಯವರ ವಿಚಾರಣೆ ನಡೆಸುತ್ತಿದ್ದು, ಡ್ರಗ್‌ ಪ್ರಕರಣ ದಲ್ಲಿ ಆರೋಪಿಯಾಗಿದ್ದು ತಲೆ ಮರೆಸಿಕೊಂಡಿರುವ ಆದಿತ್ಯಾ ಆಳ್ವಾಗೆ ಆಶ್ರಯ ನೀಡಿದ್ದ ಅನುಮಾನದ ಮೇಲೆ ಹೆಚ್ಚಿನ ವಿಚಾರಣೆ ನಡೆದಿದೆ.

Also Read  ಡಿ.16 ರಂದು ಕಡಬದಲ್ಲಿ ನಡೆಯಲಿರುವ ಪುತ್ತೂರು ತಾಲೂಕು ಸಾಹಿತ್ಯ ಸಮ್ಮೇಳನ ► ಸರ್ವಾಧ್ಯಕ್ಷರಾಗಿ ಅಂಕಣಕಾರ ನಾ. ಕಾರಂತ ಪೆರಾಜೆ ಆಯ್ಕೆ

 

error: Content is protected !!
Scroll to Top