ಉಪ್ಪಿನಂಗಡಿ: ಬಸ್‌ ಟಿಕೇಟ್‌ ಕಾಣದಾಗಿ ಶುಲ್ಕ ಪಾವತಿಸಿದ ವೃದ್ಧ ದಂಪತಿಗಳು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಅ.07: ಕಂಡೆಕ್ಟರ್‌ ಕೈಯಿಂದ ಟಿಕೇಟ್‌ ಖರೀದಿಸಿದ್ದರೂ ಟಿಕೇಟ್‌ ಪರೀಕ್ಷಿಕರು ಆಗಮಿಸಿದ ವೇಳೆ ಟಿಕೇಟ್‌ ಕಾಣದಾಗಿ ವೃದ್ಧ ದಂಪತಿಗಳು ದಂಡಪಾವತಿಸಬೇಕಾಗಿ ಬಂದ ಘಟನೆ ಕಳೆದ ದಿನ ಉಪ್ಪಿನಂಗಡಿಯಲ್ಲಿ ನಡೆದಿದೆ.

 

ಪರೀಕ್ಷಿಕರು ಎಲ್ಲಾ ಪ್ರಯಾಣಿಕರಿಂದ ಟಿಕೇಟ್‌ ಪರಿಶೀಲನೆಗಾಗಿ ಟಿಕೇಟ್‌ ಕೇಳಿದಾಗ ಕೋಡಿಂಬಾಳ ನಿವಾಸಿಯ ದಂಪತಿಯ ಕೈಯಲ್ಲಿ ಟಿಕೇಟ್‌ ಕಳೆದುಹೋಗಿತ್ತು. ಟಿಕೇಟ್‌ ಖರೀದಿಸಿದ್ದೇವೆ ಎಂದು ದಂಪತಿಗಳು ಹೇಳಿದರೂ, ಟಿಕೇಟ್‌ ನೀಡಿದ್ದೇನೆಂದೂ ಕಂಡಕ್ಟರ್ ತಿಳಿಸಿದರೂ ಪರೀಕ್ಷಿಕರಿಗೆ ಟಿಕೇಟ್‌ ಲಭಿಸದ ಕಾರಣ ದಂಡ ಶುಲ್ಕ ಪಾವತಿಸಬೇಕೆಂದು ಅವರಿಗೆ ಹೇಳಿದ್ದಾರೆ. ಅವರ ಕೈಯಲ್ಲಿದ್ದ ಒಟ್ಟು 350 ರೂ. ಹಣವನ್ನು ದಂಡವಾಗಿ ಪಾವತಿಸಿದ ದಂಪತಿಯು ಉಪ್ಪಿನಂಗಡಿಯಿಂದ ಕೋಡಿಂಬಾಳಕ್ಕೆ ಹೋಗಲು ಹಣವಿಲ್ಲದೆ ಕಂಗಾಲಾಗಿದ್ದರು. ಈ ವೇಳೆ ಅವರ ಸಂಕಷ್ಟ ಕಂಡ ಕಡಬ ಪರಿಸರ ವ್ಯಕ್ತಿಯೊಬ್ಬರು ಅವರನ್ನು ಊರಿಗೆ ಕಳುಹಿಸುವಲ್ಲಿ ಮಾನವೀಯತೆ ಮೆರೆದಿದ್ದಾರೆ. ದಂಡ ಸ್ವೀಕರಿಸಿದ ಮೊತ್ತಕ್ಕೆ  ಪರೀಕ್ಷಕರು ಯಾವುದೇ ರಶೀದಿಯನ್ನು ನೀಡದೆ ಹೋಗಿದ್ದಾರೆಂದು ತಿಳಿದು ಬಂದಿದೆ.

error: Content is protected !!

Join the Group

Join WhatsApp Group