(ನ್ಯೂಸ್ ಕಡಬ) newskadaba.com ವಿಟ್ಲ, ಅ.06: ವಿಟ್ಲ ಠಾಣಾ ಎಸ್ ಐ ವಿನೋದ್ ರೆಡ್ಡಿಯವರ ನೇತೃತ್ವದಲ್ಲಿ ಪೊಲೀಸರ ತಂಡವೊಂದು ಗಾಂಜಾ ಸಾಗಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧಿಸಿ, ಆತನ ಬಳಿ ಇದ್ದ ಸುಮಾರು 450 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆದ ಘಟನೆಯು ಕಳೆದ ದಿನ ವಿಟ್ಲ ಸಮೀಪದ ಬದನಾಜೆ ಬಸ್ ನಿಲ್ದಾಣದ ಬಳಿ ನಡೆದಿದೆ.ಆರೋಪಿಯನ್ನು ಕಡಬ ವಿದ್ಯಾಪುರ ದಿ. ಅಬ್ದುಲ್ ಖಾದರ್ ರವರ ಪುತ್ರ ಮಹಮ್ಮದ್ ಆಸೀಫ್ ಯಾನೆ ಆಚಿ (30ವ.) ಎಂದು ಗುರುತಿಸಲಾಗಿದೆ. ಇನ್ನು, ಮತ್ತೋರ್ವ ಆರೋಪಿ ಕಂಬಳಬೆಟ್ಟುವಿನ ಹಾರಿಸ್ ಪರಾರಿಯಾಗಿದ್ದಾನೆ.
ವಿಟ್ಲ ಪೊಲೀಸ್ ಠಾಣಾ ಎಸ್.ಐ ವಿನೋದ್ ರೆಡ್ಡಿ ಯವರ ಸಿಬ್ಬಂದಿಗಳಾದ ಪ್ರಸನ್ನ ಕುಮಾರ್, ವಿನಾಯಕ, ಪ್ರತಾಪ್ ರವರು ಆ ದಾರಿಯಲ್ಲಿ ದ್ವಿಚಕ್ರವಾಹನದಲ್ಲಿ ಬರುತ್ತಿದ್ದ ಆಚಿ ಯಾನೆ ಆಸೀಫ್ ನನ್ನು ತಡೆದು ನಿಲ್ಲಿಸಿ ವಿಚಾರಣೆ ನಡೆಸಿದಾಗ ಕಂಬಳಬೆಟ್ಟು ನಿವಾಸಿ ಹೌಲಾ ಹ್ಯಾರೀಸ್ ಮನೆಯ ಬಳಿ ಗಾಂಜಾ ಇಟ್ಟಿದ್ದಾನೆ.ಈ ಬಗ್ಗೆ ಆತ ನೀಡಿದ ಮಾಹಿತಿಯಂತೆ ಕಂಬಳಬೆಟ್ಟುವಿನಲ್ಲಿರುವ ಹೌಲಾ ಹ್ಯಾರೀಸ್ ನ ಮನೆಯಲ್ಲಿ ತಪಾಸಣೆ ನಡೆಸಿದ ಸಂದರ್ಭದಲ್ಲಿ ಸುಮಾರು 450 ಗ್ರಾಂ ಗಾಂಜಾ ಪತ್ತೆಯಾಗಿದೆ. ಮೋಟಾರ್ ಸೈಕಲ್ ಸಹಿತ ಸುಮಾರು 59 ಸಾವಿರ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡು ವಿಟ್ಲ ಠಾಣಾ ಪೊಲೀಸ್‌ಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿಸುತ್ತಿದ್ದಾರೆ. ಇದೀಗ ಹ್ಯಾರೀಸ್ ಯಾನೆ ಹೌಲಾ ಹ್ಯಾರೀಸ್ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೂ ಬಲೆ ಬೀಸಲಾಗಿದೆ ಎಂದು ತನಿಖಾ ತಂಡ ತಿಳಿಸಿದೆ.