ಕುಂದಾಪುರ: ಸರಣಿ ಕಳ್ಳತನ ➤ ಆರೋಪಿಗಳಿಬ್ಬರು ಪೊಲೀಸರ ವಶಕ್ಕೆ

(ನ್ಯೂಸ್ ಕಡಬ) newskadaba.com ಕುಂದಾಪುರ, ಅ.05: ಕುಂದಾಪುರದ ಆಸು – ಪಾಸಿನ ಪ್ರದೇಶದಲ್ಲಿ ನಡೆದ ಸರಣಿ ಕಳ್ಳತನಕ್ಕೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

 

 

ಆರೋಪಿಗಳನ್ನು ಹೊನ್ನಾವರದ ಮಂಕಿ ಗ್ರಾಮದ ವಿಲ್ಸನ್ ಪಿಯದಾಸ್ ಲೋಪಿಸ್ (29) ಹಾಗೂ ತೊಕೆಟ್ಟೆಯ 2 ನೇ ಕ್ರಾಸ್ ನಿವಾಸಿ ಗಂಗಾಧರ್ (40) ಎಂದು ಗುರುತಿಸಲಾಗಿದೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಪೊಲೀಸರು ಬಂಧಿಸಿದ್ದು ಬಂಧಿತರಿಂದ 64.76 ಗ್ರಾಂ ಚಿನ್ನ ಮತ್ತು 112 ಗ್ರಾಂ ಬೆಳ್ಳಿ ಮತ್ತು ಇಸ್ತ್ರಿ ಪೆಟ್ಟಿಗೆಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದೇ ರೀತಿಯಾಗಿ ಒಂದು ವರ್ಷದ ಹಿಂದೆ ಮೂರು ಕಳ್ಳತನ ಘಟನೆಗಳು ನಡೆದಿವೆ.

Also Read  ಈ 8 ರಾಶಿಯವರಿಗೆ ಶುಭಫಲ, ಕಂಕಣಭಾಗ್ಯ ದಾಂಪತ್ಯದ ಸಮಸ್ಯೆ ವ್ಯಾಪಾರಾಭಿವೃದ್ಧಿ ಕಷ್ಟಗಳು ಪರಿಹರವಾಗುತ್ತದೆ

 

 

ವಿಲ್ಸನ್ ಬಸ್ರೂರು ಮತ್ತು ಕಟ್ಕೆರಿಯಲ್ಲಿ ಬಾಡಿಗೆ ಮನೆಯಲ್ಲಿದ್ದು ಚಿನ್ನವನ್ನು ಕಳವು ಮಾಡಿ ಗಂಗಾಧರನಿಗೆ ಕೊಡುತ್ತಿದ್ದನು. ಗಂಗಾಧರ ಕುಂದಾಪುರದ ಸಹಕಾರಿ ಸಂಘದಲ್ಲಿ ಈ ಚಿನ್ನವನ್ನು ಅಡವು ಇಡುತ್ತಿದ್ದು, ಇನ್ನು ವಿಲ್ಸನ್‌ನನ್ನು ಈ ಹಿಂದೆ ಕಳ್ಳತನ ಪ್ರಕರಣದಲ್ಲಿ ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು. ಭಟ್ಕಳ ಮತ್ತು ಮಂಕಿ ಪೊಲೀಸ್ ಠಾಣೆಯಲ್ಲಿ ಇದೀಗ ಆತನ ವಿರುದ್ಧ ಪ್ರಕರಣಗಳು ದಾಖಲಾಗಿದೆ.

 

error: Content is protected !!
Scroll to Top