ಕಿಡ್ನಾಪ್​ ಆಗಿದ್ದ ಐಟಿ ಅಧಿಕಾರಿ ಪುತ್ರ ► ಶವವಾಗಿ ಪತ್ತೆ…!!!

(ನ್ಯೂಸ್ ಕಡಬ) newskadaba.com ಬೆಂಗಳೂರು,ಸೆ.22. ವಾರದ ಹಿಂದೆ ಕಿಡ್ನಾಪ್​ ಆಗಿದ್ದ ಐಟಿ ಅಧಿಕಾರಿ ಪುತ್ರ ಶರತ್(19ವರ್ಷ) 8 ದಿನಗಳ ಬಳಿಕ ಶರತ್ ಶವವಾಗಿ ಪತ್ತೆಯಾಗಿದ್ದಾನೆ.

ಶರತ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದೀಗ ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳು ಶರತ್’ಗೆ ಸಂಬಂಧಿಸಿದಂತ ಕೆಲವೊಂದು ಶಾಕಿಂಗ್ ವಿಚಾರವನ್ನು ಬಾಯ್ಬಿಟ್ಟಿದ್ದಾರೆ.

ಕೊಲೆಯಾದ ಶರತ್ ನ ಅಕ್ಕನ ಪ್ರಿಯಕರನಾದ ವಿಶಾಲ್ ಎಂಬವನು ಶರತ್ ನ್ನು​ ಕಿಡ್ನಾಪ್​ ಮಾಡಿ ಕೊಲೆ ಮಾಡಿದ್ದಾನೆ. ಇನ್ನು ಶರತ್​ ಸಹ ಆರೋಪಿ ವಿಶಾಲ್’​ನ ತಂಗಿಯನ್ನು ಪ್ರೀತಿಸುತ್ತಿದ್ದ ವಿಷಯ ಪೊಲೀಸರಿಗೆ ವಿಚಾರಣೆ ವೇಳೆ ತಿಳಿದು ಬಂದಿದೆ. ತನ್ನ ತಂಗಿಯನ್ನು ಪ್ರೀತಿಸುತ್ತಿದ್ದ ವಿಚಾರ ತಿಳಿದ ವಿಶಾಲ್​​ ಮತ್ತು ಆತನ ಗ್ಯಾಂಗ್ ಶರತ್ ನನ್ನು​​ ಕಿಡ್ನ್ಯಾಪ್ ಮಾಡಿದ್ದಾರೆ. ಈ ಭಯಾನಕ ಸತ್ಯವನ್ನ ಪೊಲೀಸರ ಮುಂದೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಶಿವಮೊಗ್ಗದಲ್ಲಿ ತಲೆಮರೆಸಿಕೊಂಡಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಶರತ್​’ನನ್ನು ಕಿಡ್ನಾಪ್​ ಮಾಡಿ ಕೊಲೆಗೈದು ಶವವನ್ನು ರಾಮೋಹಳ್ಳಿ ಕೆರೆಗೆ ಎಸೆದಿದ್ದರು. ಬಳಿಕ ಕೆರೆಯಿಂದ ಶವ ತೆಗೆದು ಬೇರೆಡೆ ಹೂತಿಟ್ಟಿದ್ದರು.

Also Read  ಏರ್ಪೋರ್ಟ್ ನಲ್ಲಿ 30 ಐಫೋನ್ ಹಾಗೂ 28 ಲ್ಯಾಪ್ ಟಾಪ್ ಗಳನ್ನು ವಶಕ್ಕೆ ಪಡೆದ ಕಸ್ಟಮ್ಸ್ ಅಧಿಕಾರಿಗಳು

2ನೇ ವರ್ಷದ ಡಿಪ್ಲೋಮಾ ಓದುತ್ತಿದ್ದ ಶರತ್, ಐಟಿ ಅಧಿಕಾರಿ ನಿರಂಜನ್ ಅವರ ಪುತ್ರ. ಹೊಸ ಬೈಕ್ ಖರೀದಿಸಿದ ಶರತ್ ತನ್ನ ಸ್ನೇಹಿತರಿಗೆ ಸಿಹಿ ಹಂಚುವ ಸಲುವಾಗಿ ಸೆಪ್ಟೆಂಬರ್‌ 14ರಂದು ಸಂಜೆ 5.30ಕ್ಕೆ ಮನೆ ಬಿಟ್ಟಿದ್ದ. ಬಳಿಕ ಮನೆಗೆ ಫೋನ್‌ ಮಾಡಿ ತಡವಾಗಿ ಬರುವುದಾಗಿ ತಿಳಿಸಿದ್ದ. ರಾತ್ರಿ 10 ಗಂಟೆ ಸುಮಾರಿಗೆ ಪೋಷಕರು ಶರತ್‌ಗೆ ಕರೆ ಮಾಡಿದ್ದು, ಆತ ಕರೆಯನ್ನು ಸ್ವೀಕರಿಸಿರಲಿಲ್ಲ. ರಾತ್ರಿ 10:30ಕ್ಕೆ ಶರತ್‌ ಮೊಬೈಲ್’​​​​ನಿಂದಲೇ ತನ್ನನ್ನು ಮೂವರು ಕಿಡ್ನಾಪ್‌ ಮಾಡಿದ್ದು, 50 ಲಕ್ಷ ನೀಡಿ, ನನ್ನನ್ನು ಉಳಿಸಿಕೊಳ್ಳಿ ಎಂದು ಮನವಿ ಮಾಡಿಕೊಳ್ಳುವ ವಾಟ್ಸ್​​​ ಆಪ್​ ವಿಡಿಯೋ ಅನ್ನು ಅಕ್ಕ, ತಾಯಿ & ತಂದೆ ಮೊಬೈಲ್​’​ಗೆ ಕಳುಹಿಸಿದ್ದ.

ಇದರಿಂದ ಹುಡುಕಾಟ ನಡೆಸಿದ್ದ ಪೊಲೀಸರಿಗೆ ಕೊನೆಯದಾಗಿ ಶರತ್​ ಮೊಬೈಲ್ ಲೊಕೇಷನ್ ಮೈಸೂರು ರಸ್ತೆಯಲ್ಲಿ ಸಿಕ್ಕಿತ್ತು. ಇದೀಗ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಪ್ರೀತಿ ವಿಚಾರ ಬಯಲಾಗಿದೆ.

Also Read  ಕ್ರೀಡಾ ಸಾಧಕರಿಗೆ ನೇಮಕಾತಿಯಲ್ಲಿದ್ದ ಶೇ 2ರ ಮೀಸಲಾತಿಗೆ ತಾತ್ಕಾಲಿಕ ತಡೆ- ಸರ್ಕಾರ ಆದೇಶ

 

error: Content is protected !!
Scroll to Top