(ನ್ಯೂಸ್ ಕಡಬ) newskadaba.com ದೊಡ್ಡತೋಟ, ಸೆ.30: ಸುಳ್ಯ ದೊಡ್ಡತೋಟದಿಂದ ಮರ್ಕಂಜ ರಸ್ತೆಯ ನಳಿಯಾರು ಎಂಬಲ್ಲಿ ಜೀಪೊಂದು ಚಾಲಕನ ನಿಯಂತ್ರಣ ತಪ್ಪಿ ತೋಡಿಗಿಳಿದು ಭಾರೀ ಅಪಾಯದಿಂದ ಬಚಾವ್ ಆದ ಘಟನೆ ಕಳೆದ ದಿನ ಸಂಜೆ ವರದಿಯಾಗಿದೆ.
ದೊಡ್ಡತೋಟ – ಮರ್ಕಂಜಕ್ಕೆ ಹೋಗುವ ರಸ್ತೆಯ ದೊಡ್ಡತೋಟದಿಂದ ಸ್ವಲ್ಪ ಮುಂದಕ್ಕೆ ಹೋದಂತೆ ಇಳಿಜಾರು ಹಾಗೂ ತಿರುವು ಇದೆ. ಹಾಗೂ ಕೆಳಭಾಗದಲ್ಲಿ ತೋಡೊಂದು ಹರಿಯುತ್ತಿದ್ದು, ತಿರುವಿನಲ್ಲಿ ನಿಯಂತ್ರಣ ತಪ್ಪಿದ ಜೀಪು ನೇರವಾಗಿ ಸುಮಾರು 50 ಅಡಿ ಕೆಳಗೆ ಹರಿಯುವ ತೋಡಗೆ ಇಳಿದಿದೆ. ಮರ್ಕಂಜ ಬಳಿಯ ಕಟ್ಟಕೋಡಿ ಗಣಪಯ್ಯ ಗೌಡ ಎಂಬವರೇ ಜೀಪು ಚಾಲಕರಾಗಿದ್ದು, ಹಾಗೂ ಜೀಪಿನಲ್ಲಿ ಓರ್ವ ಚಾಲಕ ಮಾತ್ರ ಇದ್ದು, ಯಾವುದೇ ಅಪಾಯವಿಲ್ಲದೇ ಅದೃಷ್ಟವಶಾತ್ ನಿಂದ ಪಾರಾಗಿದ್ದಾರೆ.