ಉದ್ಯಮಿ ಹಾಜಿ ಎಸ್.‌ ಇಬ್ರಾಹಿಂ ಕೆಮ್ಮಾಡಿ ನಿಧನ

(ನ್ಯೂಸ್ ಕಡಬ) newskadaba.com ಸುಳ್ಯ, ಸೆ.23: ಸುಳ್ಯ ತಾಲೂಕು ಸಂಯುಕ್ತ ಜಮಾಯತ್‌ ಮಾಜಿ ಅಧ್ಯಕ್ಷ ಸುಳ್ಯದಲ್ಲಿ ಹಿಂದೆ ಉದ್ಯಮ ನಡೆಸುತ್ತಿದ್ದು ಪುತ್ತೂರು ತಾಲೂಕು ಮುಸ್ಲಿಂ ಸಂಯುಕ್ತ ಜಮಾಅತ್ ನ ಅಧ್ಯಕ್ಷರು, ಸುಳ್ಯ ಎ.ಪಿ.ಯಂ.ಸಿ ನಿರ್ದೇಶಕ ಆದಂ ಹಾಜಿ ಕಮ್ಮಾಡಿಯವರ ಸಹೋದರ ಹಾಜಿ ಎಸ್.‌ ಇಬ್ರಾಹಿಂ ಕಮ್ಮಡಿ(75) ರವರು ಅನಾರೋಗ್ಯದಿಂದ ಇಂದು ಬೆಳಿಗ್ಗೆ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.

ಕಮ್ಮಾಡಿ ಫ್ಲೈವುಡ್‌ ಮತ್ತು ಬ್ಲಕ್‌ ಬೋರ್ಡ್‌ ಸಂಸ್ಥೆಯ ಮಾಲಕರೂ ಉದ್ಯಮಿಯ ಆಗಿರುವ ಹಾಜಿ ಎಸ್.‌ ಇಬ್ರಾಹಿಂ ಕೆಮ್ಮಾಡಿಯವರು ಸಾಮಾಜಿಕ ಧಾರ್ಮಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದರು. ಎಲ್ಲರ ಆರೋಗ್ಯ ಕಾಪಾಡುವ ಸೇವೆ ಮಾಡುವ ಉದ್ದೇಶದಿಂದ 2016ರಲ್ಲಿ ಕಮ್ಮಾಡಿ ಮೈದಾನದಲ್ಲಿ ಬೃಹತ್‌ ಆಸ್ಪತ್ರೆಯನ್ನು ಕಟ್ಟಲು ಮುಂದಾಗಿದ್ದರು. ಬಡ ಮಕ್ಕಳಿಗೆ ವಿದ್ಯಾದಾನ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಮೃತರು ಉದ್ಯಮಿ ಡಾ. ಅಶ್ರಫ್‌ ಎಸ್‌ ಕಮ್ಮಾಡಿ, ಪುತ್ರಿಯಾದ ನ್ಯಾಯವಾದಿ ನೋಟರಿ ಫಜಲ್‌ ರಹಿಂ ಹಾಗೂ ಪತ್ನಿಯನ್ನು ಅಗಲಿದ್ದಾರೆ.

Also Read  ವಿಟ್ಲ: 8ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ ➤ ಮುಂದುವರಿದ ತನಿಖೆ

error: Content is protected !!
Scroll to Top